ಪಂಜಾಬ್‌ ಗೆ ಧವನ್ ಎಂಟ್ರಿ: ಲಕ್ನೋ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ -ಪಂಜಾಬ್‌ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗಲಿವೆ.

ಟಾಸ್‌ ಗೆದ್ದ ಪಂಜಾಬ್‌ ತಂಡದ ನಾಯಕ ಶಿಖರ್‌ ಧವನ್‌ ಮೊದಲು ಬೌಲಿಂಗ್‌ ಮಾಡುವ ತೀರ್ಮಾನ ಮಾಡಿದ್ದಾರೆ.

ಭುಜದ ಗಾಯದಿಂದಾಗಿ ಕಳೆದ ಮೂರು ಪಂದ್ಯ ತಪ್ಪಿಸಿಕೊಂಡಿದ್ದ ಶಿಖರ್‌ ಧವನ್‌ ತಂಡಕ್ಕೆ ವಾಪಸಾಗಿದ್ದಾರೆ. ಪಂದ್ಯಕ್ಕಾಗಿ ಪಂಜಾಬ್‌ ತಂಡ ಎರಡು ಪ್ರಮುಖ ಬದಲಾವಣೆಯನ್ನು ಮಾಡಿದೆ. ಮ್ಯಾಥ್ಯೂ ಶಾರ್ಟ್‌ ಬದಲಿಗೆ ಸಿಕಂದರ್‌ ರಾಜಾ ತಂಡಕ್ಕೆ ವಾಪಸಾಗಿದ್ದರೆ, ಅದರೊಂದಿಗೆ ನೂತನ ವೇಗಿ ಗರ್ನೂರ್‌ ಬ್ರಾರ್‌ ಈ ಪಂದ್ಯದ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಇನ್ನು ಲಕ್ನೋ ಸೂಪರ್‌ ಜೈಂಟ್ಸ್‌ ಪಂದ್ಯಕ್ಕಾಗಿ ತಂಡಕ್ಕೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!