ಪಂಜಾಬ್ ಗೆ ಧವನ್ ಬಲ: ಆರ್‌ಸಿಬಿಗೆ 177 ರನ್ ಟಾರ್ಗೆಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಐಪಿಎಲ್ ಟೂರ್ನಿ 2024ರ ಇಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ 176 ರನ್ ಸಿಡಿಸಿತು.

ಬೆಂಗಳೂರಿನಲ್ಲಿ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನಿಂಗ್ಸ್ ಆರಂಭಿಸಿದ ಪಂಜಾಬ್ ಕಿಂಗ್ಸ್‌ ನ ಜಾನಿ ಬೈರ್‌ಸ್ಟೋ 8 ರನ್ ಸಿಡಿಸಿ ನಿರ್ಗಮಿಸಿದರು. ಬಳಿಕ ಶಿಖರ್ ಧವನ್ ಹಾಗೂ ಪ್ರಭಸಿಮ್ರನ್ ಸಿಂಗ್ ಜೊತೆಯಾಟದಿಂದ ರನ್ ರೇಟ್ ಹೆಚ್ಚಾಯಿತು.

ಪ್ರಭ್‌ಸಿಮ್ರನ್ ಸಿಂಗ್ 25 ರನ್ ಸಿಡಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಲಿಯಾಮ್ ಲಿವಿಂಗ್‌ಸ್ಟೋನ್ 17 ರನ್ ಸಿಡಿಸಿ ಔಟಾದರು. ನಾಯಕ ಶಿಖರ್ ಧವನ್ 37 ಎಸೆತದಲ್ಲಿ 45 ರನ್ ಸಿಡಿಸಿ ಔಟಾದರು. ಧವನ್ ವಿಕೆಟ್ ಪತನದ ಬಳಿಕ ಸ್ಯಾಮ್ ಕುರನ್ ಹಾಗೂ ಜಿತೇಶ್ ಶರ್ಮಾ ಜೊತಯಾಟದಿಂದ ಪಂಜಾಬ್ ಚೇತರಿಸಿಕೊಂಡಿತು.

ಸ್ಯಾಮ್ ಕುರನ್ 23 ರನ್ ಸಿಡಿಸಿ ಔಟಾದರು. ಕುರನ್ ಬೆನ್ನಲ್ಲೇ 27 ರನ್ ಸಿಡಿಸಿದ ಜಿತೇಶ್ ಶರ್ಮಾ ವಿಕೆಟ್ ಪತನಗೊಂಡಿತು. ಶಶಾಂಕ್ ಸಿಂಗ್ 8 ಎಸೆತದಲ್ಲಿ 21 ರನ್ ಸಡಿಸಿ ಅಬ್ಬರಿಸಿದರು. ಇತ್ತ ಹರ್ಪ್ರೀತ್ ಬ್ರಾರ್ 2 ರನ್ ಕಾಣಿಕೆ ನೀಡಿದರು. ಈ ಮೂಲಕ ಪಂಜಾಬ್ ಕಿಂಗ್ಸ್ 6 ವಿಕೆಟ್ ನಷ್ಟಕ್ಕೆ 176 ರನ್ ಸಿಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!