ಹೊಸದಿಗಂತ ವರದಿ, ಬೀದರ್:
ತಿಂಗಳು ಕಳೆದರೂ ರೈತರಿಗೆ ಬರ ಪರಿಹಾರ ವಿತರಣೆಯಲ್ಲಿ ನಿಷ್ಕಾಳಜಿ ತೋರುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಢೋಂಗಿತನದ ಮುಖವಾಡ ಧರಿಸಿದೆ ಎಂದು ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ಮುಖಂಡ ಆರ್. ಅಶೋಕ್ ವಾಗ್ದಾಳಿ ನಡೆಸಿದರು.
ಬೀದರ್ ತಾಲ್ಲೂಕಿನ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸುಳ್ಳು ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಮತದಾರರನ್ನು ಮರುಳು ಮಾಡುವ ಮೂಲಕ ಅಧಿಕಾರಕ್ಕೆ ಬಂದ ನಂತರ ರೈತರ ಸಂಕಷ್ಟ ನಿವಾರಿಸಲು ಪರಿಹಾರ ವಿತರಣೆಯಲ್ಲಿ ಕ್ರಮ ವಹಿಸುತ್ತಿಲ್ಲ ಸಿಎಂ ಸಿದ್ದರಾಮಯ್ಯನವರು ಮಾತೆತ್ತಿದರೆ ಕೇಂದ್ರದತ್ತ ಬೊಟ್ಟು ಮಾಡುತ್ತಾರೆ ಕೇಂದ್ರದಿಂದ ರಾಜ್ಯಕ್ಕೆ ಬಂದಿರುವ ಅನುದಾನ ಏನಾಯಿತು? ರಾಜ್ಯದ ಮುಖ್ಯಮಂತ್ರಿ ಸಾರ್ವಜನಿಕವಾಗಿ ಸುಳ್ಳು ಹೇಳುವುದು ಶೋಭೆ ತರುವುದಿಲ್ಲ ಈ ನಿಷ್ಕಾಳಜಿ ಧೋರಣೆ ವಿರುದ್ಧ ಬಿಜೆಪಿ ರಾಜ್ಯದಲ್ಲಿ ಹೋರಾಟ ನಡೆಸಲಿದೆ ಎಂದುತ್ತಿದ್ದರು. ರೈತರಿಗೆ ಬೆಂಬಲಿಸಿ ಸಕಾಲದಲ್ಲಿ ಬರ ಪರಿಹಾರ ವಿತರಣೆಯಾಗಲು ಬಿಜೆಪಿ ಹೋರಾಟ ನಡೆಸಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರದಿಂದ ಅಭಿವೃದ್ಧಿ ಕಾಮಗಾರಿಗಳು ನಿಂತು ಹೋಗಿವೆ, ಗುತ್ತಿಗೆದಾರರಿಗೆ ಹಿಂದಿನ ಮುಗಿದಿರುವ ಕಾಮಗಾರಿಗಳ ಹಣ ಬಿಡುಗಡೆ ಮಾಡುತ್ತಿಲ್ಲ, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸರ್ಕಾರದ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದ ಇತಿಹಾಸದಲ್ಲೇ ಇಂತಹ ಭ್ರಷ್ಟ ಸರ್ಕಾರ ಕಂಡಿರಲಿಲ್ಲ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಹೋಗಲು ದರೋಡೆಯ ಸ್ಕೀಂ, ರಾಜ್ಯದಲ್ಲಿ ಕರ ಪಾವತಿದಾರರ ಹಣ ನೆರೆ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ಆಮಿಷ ಒಡ್ಡಲು ಕಾಂಗ್ರೆಸ್ ಪಕ್ಷ ಹಂಚುತ್ತಿದೆ ಈ ಕುರಿತು ತೆಲಂಗಾಣ ರಾಜ್ಯ ಸರ್ಕಾರ ಬಹಿರಂಗವಾಗಿ ಹೇಳಿಕೆ ನೀಡಿದೆ. ಅಧಿಕಾರದ ಹಪಾಹಪಿ ಇರುವ ಕಾಂಗ್ರೆಸ್ಸಿಗರು ರಾಜ್ಯದಲ್ಲಿ ಮಾಡಿದಂತೆ ಇತರೆ ರಾಜ್ಯಗಳಲ್ಲಿ ಆಮಿಷ ಒಡ್ಡಿ ಶತಾಯಗತಾಯ ಮಾಡಿ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಪರ್ಯಾಯ ಹೆಸರೇ ಕಾಂಗ್ರೆಸ್ ರಾಜ್ಯ ಹಾಗೂ ದೇಶದ ಜನತೆ ಎಚ್ಚೆತ್ತು ಕಾಂಗ್ರೆಸ್ ಪಕ್ಷವನ್ನು ಶತಮಾನಗಳವರೆಗೆ ಅಧಿಕಾರದಿಂದ ದೂರವಿಟ್ಟರೇನೆ ದೇಶ ಹಾಗೂ ರಾಜ್ಯ ಎಲ್ಲಾ ಸಮುದಾಯಗಳು ಶಾಂತಿಯಿಂದ ಸಹಬಾಳ್ವೆಯ ಜೊತೆಗೆ ಅಭಿವೃದ್ಧಿ ನಡೆಸಬಹುದು ಎಂದು ಹೇಳಿದರು.