ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಧೂಮ್ ನಟಿ ಇಶಾ ಡಿಯೋಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಬಾಲಿವುಡ್ ನಟ ಧಮೇಂದ್ರ ಮತ್ತು ಹೇಮಾ ಮಾಲಿನಿ (Hema Malini) ಪುತ್ರಿ ಇಶಾ ಡಿಯೋಲ್ (Esha Deol) ಅವರ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಉದ್ಯಮಿ ಭರತ್ ತಖ್ತಾನಿ (Bharat Takhtani) ಜೊತೆಗಿನ 12 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ್ದಾರೆ.

ವಿಚ್ಛೇದನದ ಬಗ್ಗೆ ಇಶಾ ಡಿಯೋಲ್- ಭರತ್ ತಖ್ತಾನಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.

ನಾವು ಪರಸ್ಪರ ಒಪ್ಪಿಗೆಯ ಮೇರೆಗೆ ಸೌಹಾರ್ದಯುತವಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ಜೀವನ ಬದಲಾಗುತ್ತಿರುವ ಈ ಸಮಯದಲ್ಲಿ ನಮ್ಮ ಇಬ್ಬರು ಮಕ್ಕಳ ಉತ್ತಮ ಹಿತಾಸಕ್ತಿ ಮತ್ತು ಯೋಗಕ್ಷೇಮ ನಮಗೆ ಅತ್ಯಂತ ಮಹತ್ವದ್ದಾಗಿದೆ. ನಮ್ಮ ಗೌಪ್ಯತೆಯನ್ನ ಗೌರವಿಸುವುದನ್ನು ನಾವು ಪ್ರಶಂಸಿಸುತ್ತೇವೆ ಎಂದು ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಜಂಟಿ ಹೇಳಿಕೆ ನೀಡಿದ್ದಾರೆ.

2012ರಲ್ಲಿ ಇಶಾ ಡಿಯೋಲ್- ಭರತ್ ತಖ್ತಾನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2017ರಲ್ಲಿ ಮಗಳು ರಾಧ್ಯಗೆ ಇಶಾ ಡಿಯೋಲ್ ಜನ್ಮ ನೀಡಿದರು. 2019ರಲ್ಲಿ ಎರಡನೇ ಮಗುವನ್ನ ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಬರಮಾಡಿಕೊಂಡಿದ್ದರು. ಇದೀಗ 12 ವರ್ಷಗಳ ದಾಂಪತ್ಯ ಜೀವನಕ್ಕೆ ಇಶಾ ಡಿಯೋಲ್- ಭರತ್ ಬ್ರೇಕ್ ಹಾಕಿದ್ದಾರೆ.

ಧೂಮ್, ಜಸ್ಟ್ ಮ್ಯಾರೀಡ್, ನೋ ಎಂಟ್ರಿ, ಡಾರ್ಲಿಂಗ್, ಶಾದಿ ನಂ.1 ಸೇರಿದಂತೆ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಇಶಾ ನಟಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!