ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲ್ಟಿ ಸ್ಟಾರ್ ಕಾಸ್ಟ್ ಇರುವ ಬಾಲಿವುಡ್ ಬಿಗ್ ಬಜೆಟ್ ಸಿನಿಮಾ ಧುರಂಧರ್ ಇನ್ನೇನು ಕೆಲವೇ ದಿನಗಳಲ್ಲಿ ರಿಲೀಸ್ ಆಗುತ್ತಿದೆ. ಆದರೆ ನಿರೀಕ್ಷೆಯಂತೆ ಸಿನಿಮಾಗೆ ರೆಸ್ಪಾನ್ಸ್ ಸಿಗೋದಿಲ್ಲ ಎನ್ನಲಾಗಿದೆ.
ಇದಕ್ಕೆಲ್ಲ ಧುರಂಧರ್ ಹೀರೋ ರಣ್‌ವೀರ್ ಸಿಂಗ್ ಕಾರಣ ಎನ್ನಲಾಗಿದೆ. ಸಿನಿಮಾ ಇನ್ನೇನು ರಿಲೀಸ್ ಆಗೋಕೆ ಕೆಲವೇ ದಿನಗಳಿದೆ ಎನ್ನುವಾಗ ರಣ್‌ವೀರ್ ಜನರಿಗೆ ಇಷ್ಟವಾಗದಂತಹ ಕೆಲಸಗಳನ್ನು ಮಾಡುತ್ತಾರೆ. ಇತ್ತೀಚೆಗಷ್ಟೇ ಕಾಂತಾರ ಸಿನಿಮಾವನ್ನು ತಮಾಷೆ ರೀತಿಯಲ್ಲಿ ರಣ್‌ವೀರ್ ತೋರಿಸಿದ್ದರು. ಚಾವುಂಡಿ ತಾಯಿ ದೈವ ಎಂದು ಹೇಳುವ ಬದಲು ದೆವ್ವ ಎಂದಿದ್ದರು. ಇದೆಲ್ಲ ಅಭಿಮಾನಿಗಳಿಗೆ ಇಷ್ಟವಾಗಿಲ್ಲ.
ತುಂಬಾ ಟ್ರೋಲ್ ಆದ ನಂತರವಾದ್ರೂ ರಣ್‌ವೀರ್ ಸಾರ್ವಜನಿಕವಾಗಿ ಕ್ಷಮೆ ಕೇಳಿಲ್ಲ. ಇದರಿಂದ ಕರ್ನಾಟಕದಲ್ಲಿ ಸಿನಿಮಾ ಕಲೆಕ್ಷನ್ ಹೆಚ್ಚೇನು ಆಗುವುದಿಲ್ಲ. ‘ಧುರಂಧರ್’ ತಂಡದವರು ಎಲ್ಲಿಯೂ ದೊಡ್ಡ ಮಟ್ಟದಲ್ಲಿ ಸಿನಿಮಾ ಪ್ರಚಾರ ಮಾಡುತ್ತಿಲ್ಲ. ಇದರಿಂದ ಅಡ್ವಾನ್ಸ್ ಬುಕಿಂಗ್ ಚೇತರಿಸಿಕೊಳ್ಳುತ್ತಿಲ್ಲ. ಈ ಸಿನಿಮಾದ ಬಜೆಟ್ 300-350 ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಹೀಗಾಗಿ, ಈ ಚಿತ್ರ ಲಾಭ ಕಾಣಬೇಕು ಎಂದರೆ ಮೊದಲ ದಿನ 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಬೇಕಿದೆ. ಆದರೆ, ಸದ್ಯದ ಲೆಕ್ಕಾಚಾರದ ಪ್ರಕಾರ ಈ ಸಿನಿಮಾ ಮೊದಲ ದಿನ 15-20 ಕೋಟಿ ರೂಪಾಯಿ ಗಳಿಸಬಹುದು ಎನ್ನಲಾಗುತ್ತಿದೆ.
CINE | ನಿರೀಕ್ಷೆಯಂತೆ ಗಳಿಕೆ ಮಾಡೋದಿಲ್ಲ ಧುರಂಧರ್, ಇದಕ್ಕೆಲ್ಲ ರಣ್‌ವೀರ್ ಸಿಂಗ್ ಕಾರಣ?

