ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತೆ ಸುದ್ದಿಯಲ್ಲಿದ್ದು, ತನ್ನದೇ 30ಹಿರಿಯ ಅಧಿಕಾರಿಗಳನ್ನು ಗಲ್ಲಿಗೇರಿಸಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.
ಭೀಕರ ಪ್ರವಾಹದಿಂದ ದೇಶವನ್ನು ಉಳಿಸಲು ಅಶಕ್ತರಾದ ಅಧಿಕಾರಿಗಳನ್ನು ಗಲ್ಲಿಗೇರಿಸಲಾಗಿದೆ. ಇತ್ತೀಚೆಗೆ ರಣ ಭೀಕರ ಮಳೆ ಹಾಗೂ ಭೂಕುಸಿತದಿಂದ ಉತ್ತರ ಕೊರಿಯಾ ತತ್ತರಿಸಿತ್ತು. ಅದರಲ್ಲೂ ಚಾಂಗಾಂಗ್ ಪ್ರಾಂತ್ಯದ ಹಲವು ಭಾಗಗಳನ್ನು ಧ್ವಂಸಗೊಂಡಿತ್ತು. ಪರಿಣಾಮ ಸುಮಾರು 4000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಜನರ ಸಾವಿಗೆ ಕಾರಣವಾಗಿರುವ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ನೀಡಲು ಆದೇಶಿಸಿದ್ದಾನೆ. ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಿರ್ಧಾರಕ್ಕೆ ಇಡೀ ಜಗತ್ತು ಬೆಚ್ಚಿಬಿದ್ದಿದೆ.
ಈ ದುರಂತದಲ್ಲಿ ಜವಾಬ್ದಾರಿಗಳನ್ನು ಸರಿಯಾಗಿ ಪೂರೈಸಲು ಸಾಧ್ಯವಾಗದ ಅಧಿಕಾರಿಗಳನ್ನು ಶಿಕ್ಷಿಸುವಂತೆ ತಿಳಿಸಿದ್ದಾನೆ. ಕಳೆದ ತಿಂಗಳು ಕೂಡ ಕೆಲವರನ್ನು ಇದೇ ಶಿಕ್ಷೆಗೆ ಗುರಿಪಡಿಸಲಾಗಿತ್ತು ಎಂದು ಹೇಳಲಾಗಿದೆ.