ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ವಿವಿಧ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು, ಒಂದೆಡೆ ಅಮೆರಿಕ-ಇರಾನ್ ನಡುವಿನ ಮಾತುಕತೆ ವಿಫಲವಾಗಿದ್ದರೆ, ಇತ್ತ ಮತ್ತೊಂದೆಡೆ ಟ್ರಂಪ್ ಚೀನಾದ ವಿರುದ್ಧ ಮುಗಿಬಿದ್ದಿದ್ದು, ಹೆಚ್ಚಿನ ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದಾರೆ.
ಇರಾನ್‌ಗೆ ಬೆಂಬಲ ನೀಡಿ ಚೀನಾ ಶೋಲ್ಡರ್ ಕ್ಷಿಪಣಿಗಳನ್ನು ನೀಡಲು ಮುಂದಾಗಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಈ ಬೆನ್ನಲ್ಲೇ ಟ್ರಂಪ್ ಸರಕುಗಳ ಮೇಲೆ ಶೇ. 50ರಷ್ಟು ಪ್ರತಿಶತ ಸುಂಕ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಫಾಕ್ಸ್ ನ್ಯೂಸ್‌ನ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಇರಾನ್ ಗೆ ಯಾವ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಲು ಹೊರಟಿದೆಯೋ ಆ ದೇಶದ ಸರಕುಗಳ ಮೇಲೆ ಶೇ. 50ರಷ್ಟು ಪ್ರತಿಶತ ಸುಂಕ ವಿಧಿಸಲಾಗುವುದು. ಪ್ರಸುತ್ತ ನನ್ನ ಹಾಗೂ ಚೀನಾ ನಡುವಿನ ಸಂಬಂಧ ಉತ್ತಮವಾಗಿದ್ದು, ಅವರು ಯಾವುದೇ ಆ ರೀತಿಯ ತಪ್ಪು ಕೆಲಸ ಮಾಡುವುದಿಲ್ಲ ಎಂಬುವುದು ನನ್ನ ನಂಬಿಕೆ. ಒಂದು ವೇಳೆ ಚೀನಾವು ಕೂಡ ಆ ತಪ್ಪು ಮಾಡಿದರೆ ಖಂಡಿತ ಅವರು ಕೂಡ ಶೇ.50 ಟ್ಯಾರಿಫ್ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ನಮ್ಮಲ್ಲಿ ತೈಲ ಪ್ರಮಾಣ ಉತ್ತಮವಾಗಿದ್ದು, ಚೀನಾ ತನ್ನ ಹಡಗುಗಳನ್ನು ಇಲ್ಲಿಗೆ ಕಳುಹಿಸಬಹುದು. ಇಲ್ಲವಾದಲ್ಲಿ ಚೀನಾ ತನ್ನ ಹಡಗುಗಳನ್ನು ವೆನೆಜುವೆಲಾಗೆ ಕಳುಹಿಸಲು ಅವಕಾಶವಿದ್ದು, ಅಲ್ಲಿಂದಲೂ ತೈಲ ಖರೀದಿಗೆ ನಾವು ಬೆಂಬಲ ನೀಡುತ್ತೇವೆ ಎಂದು ಟ್ರಂಪ್ ಹೇಳಿದರು.



