ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ‌ಒದ್ದಿದ್ದರಾ ದರ್ಶನ್?: ಚಾರ್ಜ್ ಶೀಟ್ ನಲ್ಲಿದೆ ರೋಚಕ ವಿಚಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್;

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಗಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಕೊಲೆ ಪ್ರಕರಣಕ್ಕೆ ಕಾರಣವಾದ ರೇಣುಕಾ ಸ್ವಾಮಿ ಹಾಗೂ ಪವಿತ್ರಾ ಗೌಡ ನಡುವೆ ನಡೆದಿದ್ದ ಮೊಬೈಲ್ ಸಂದೇಶದ ವಿವರಗಳನ್ನು ಸಹ ಆರೋಪ ಪಟ್ಟಿಯಲ್ಲಿ ವಿವರವಾಗಿ ಉಲ್ಲೇಖ ಮಾಡಲಾಗಿದೆ.

ರೇಣುಕಾಸ್ವಾಮಿ ಮೇಲೆ ದರ್ಶನ್ ಕೆಂಡಾಮಂಡಲ ಆಗಲು ಕಾರಣವೇನು? ಅಷ್ಟಕ್ಕೂ ರೇಣುಕಾಸ್ವಾಮಿ ಪವಿತ್ರಗೌಡಗೆ ಏನೇನ್ ಸಂದೇಶಗಳನ್ನು ಕಳುಹಿಸಿದ್ದ. ಎಂಬ ಮಾಹಿತಿ ಬಹಿರಂಗವಾಗಿದೆ.

ದರ್ಶನ್ ಕೋಪಕ್ಕೆ ಕಾರಣವಾಗಿದ್ದು ಎರಡು ಅಶ್ಲೀಲ ವಿಡಿಯೊ, ಒಂದು ಫೋಟೋ. ರೇಣುಕಾಸ್ವಾಮಿ ಪವಿತ್ರಗೌಡ ಫೋಟೋ ಕಂಡು ಅಶ್ಲೀಲ ಮೆಸೇಜ್ ಮಾಡಿದ್ದ. ಮೆಸೇಜ್ ಹಿಂದೆಯೆ ಎರಡು ಅಶ್ಲೀಲ ವಿಡಿಯೋ ಕಳಿಸಿ, ಅಶ್ಲೀಲವಾದ ಸಂದೇಶಗಳ ರವಾನಿಸಿದ್ದ. ಇದಾದ ಬಳಿಕ ರೇಣುಕಾಸ್ವಾಮಿ ತನ್ನ ಮರ್ಮಾಂಗದ ಫೋಟೋವನ್ನು ಪವಿತ್ರಾಗೌಡಗೆ ಕಳಿಸಿದ್ದನು.

ಇದೆಲ್ಲವನ್ನೂ ನೋಡಿದ ದರ್ಶನ್‌ ಕೋಪಗೊಂಡು ಕೊಳಕು ಭಾಷೆಯಿಂದ ನಿಂದಿಸಿ ರೇಣುಕಾಸ್ವಾಮಿಗೆ ಹಲ್ಲೆ ಮಾಡಿ ಏನೋ ಸೂ.. ಮಗನೇ, ನನ್ನ ಹೆಂಡತಿಗೆ ಕೆಟ್ಟ ಮೆಸೇಜ್ ಮಾಡುತ್ತೀಯಾ? ಎಷ್ಟೋ ಧೈರ್ಯ ನಿಂಗೆ ಎಂದು ಕಾಲಿಂದ ಎದೆ ಭಾಗಕ್ಕೆ ಒದ್ದಿದ್ದ. ಬಳಿಕ ಏಯ್ ಪವನ್ ಇವನ ಪ್ಯಾಂಟ್ ಬಿಚ್ಚೋ ಎಂದ ದರ್ಶನ್‌, ಮರ್ಮಾಂಗಕ್ಕೆ ಒದ್ದಿದ್ದನು .

ಪವಿತ್ರಾ ಮೊಬೈಲ್‌ನಲ್ಲಿ ಏನೆಲ್ಲ ಇತ್ತು?
ಐಫೋನ್‌ 15 ಪ್ರೋ ಮ್ಯಾಕ್ಸ್‌ ಬಳಸುತ್ತಿದ್ದ ಪವಿತ್ರಾ ಮೊಬೈಲ್‌ನಲ್ಲಿ ಪ್ರಕರಣ ಸಂಬಂಧ 65 ಫೋಟೊಗಳು ಪತ್ತೆಯಾಗಿವೆ. 17 ಸ್ಕೀನ್‌‌ ಶಾಟ್‌ಗಳು, ರೇಣುಕಾ ಕಳಿಸಿದ್ದ 20 ಅಶ್ಲೀಲ ಸಂದೇಶಗಳ ಸ್ಕ್ರೀನ್‌ಶಾಟ್‌ ಇವೆ.

ನಟ ದರ್ಶನ್‌ ಬಳಸುತ್ತಿದ್ದ ಐಫೋನ್‌ 15 ಪ್ರೋನಲ್ಲಿ ಗೆಳತಿ ಹೆಸರನ್ನು 3 ಹೆಸರಲ್ಲಿ ಸೇವ್ ಮಾಡಿದ್ದರು. PAVI, PAVIIII, PVITRA GOWDA ಹೆಸರಲ್ಲಿ ಸೇವ್‌ ಮಾಡಿ ಪವಿತ್ರ ಜತೆ ಚಾಟಿಂಗ್‌ ನಡೆಸಿದ್ದಾರೆ. ಡಿಲೀಟ್‌ ಆಗಿದ್ದ ವಾಟ್ಟಾಪ್‌ ಕಾಲ್ ರಿಟ್ರೀವ್‌ ವೇಳೆ ಪತ್ತೆಯಾಗಿದೆ.

ಇನ್ನು ವಿನಯ್‌ ಮೊಬೈಲ್‌ನಲ್ಲಿ ಪವಿತ್ರಾ ಗೌಡ ಫೋನ್‌ ನಂಬರ್‌ ಅನ್ನು ಡಿ-ಬಾಸ್‌ ವೈಫ್‌ ಎಂದು ಸೇವ್‌ ಆಗಿದೆ. ಪ್ರದೂಷ್‌, ಪವನ್‌ ಜತೆ 42 ಬಾರಿ ವಾಟ್ಸಾಪ್‌ ಕಾಲ್‌ ಸಂಭಾಷಣೆ ನಡೆದಿದೆ. ಪ್ರಕರಣ ಸಂಬಂಧ 10 ಫೋಟೊಗಳು ರಿಟ್ರೀವ್‌ನಲ್ಲಿ ಪತ್ತೆಯಾಗಿದೆ.

ದೀಪಕ್‌ ಮೊಬೈಲ್‌ನಲ್ಲಿ 30 ನಿಮಿಷದ ಆಡಿಯೊ ಸಂಭಾಷಣೆ ಪತ್ತೆಯಾಗಿದೆ. ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ನಡೆಸಿರುವ ಮಾತುಕತೆ ಇದಾಗಿದೆ. ಸ್ವಾಮಿ ಕೊಲೆಗೆ ಸಂಬಂಧಿಸಿದಂತೆ 5 ಆಡಿಯೋ ಸಂಭಾಷಣೆ ಪತ್ತೆಯಾಗಿದೆ. ಜತೆಗೆ ಮತ್ತೊಬ್ಬ ಆರೋಪಿ ಅನುಕುಮಾರ್‌ ಮೊಬೈಲ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ 2 ವಿಡಿಯೊ ಸಿಕ್ಕಿದೆ. ಆರೋಪಿ ಪ್ರದೂಷ್‌ ಜತೆ ನಡೆಸಿರುವ ಚಾಟಿಂಗ್‌ ಸಿಕ್ಕಿದೆ. ಅನುಕುಮಾರ್‌ ಹಾಗೂ ರಾಘವೇಂದ್ರ ಪತ್ನಿ ಸಹನಾ ಜತೆ ನಡೆಸಿರುವ ಸಂಭಾಷಣೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!