ಹೊಸದಿಗಂತ ಡಿಜಿಟಲ್ ಡೆಸ್ಕ್;
8 ತಿಂಗಳ ತುಂಬು ಗರ್ಭಿಣಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಕನಕಗಿರಿಯಲ್ಲಿ ನಡೆದಿದೆ.
ಮೈಸೂರಿನ ಕನಕಗಿರಿಯಲ್ಲಿ ಚೈತ್ರಾ @ ಚಿಕ್ಕದೇವಿ (23) ಆತ್ಮಹತ್ಯೆ ಮಾಡಿಕೊಂಡ ಗರ್ಭಿಣಿ. ಎರಡು ವರ್ಷಗಳ ಹಿಂದೆ ಕನಕಗಿರಿಯ ಶರತರಾಜು ಜೊತೆ ಚೈತ್ರ ಮದುವೆಯಾಗಿದ್ದಳು.
ಇನ್ನೂ ಚೈತ್ರಾ ಪತಿ ಶರತ್ ರಾಜ್ ನನ್ನು ವಿದ್ಯಾರಣ್ಯಪುರಂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಿರುಕುಳ ತಾಳಲಾರದೆ ಚೈತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪ ಹೇಳಿ ಬಂದಿದ್ದು ಪತಿಯ ಮನೆಯ ವಿರುದ್ಧ ವಿರುದ್ಧ ಚೈತ್ರ ಪೋಷಕರು ದೂರು ಸಲ್ಲಿಸಿದ್ದು, ಘಟನೆ ಕುರಿತಂತೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.