ಲಕ್ಷ್ಮೀ ದೇವಿಗೆ ಅವಮಾನ ಮಾಡಿದ್ರಾ ಏಕ್ತಾ ಕಪೂರ್?: ‘ಗಂಧೀಬಾತ್​’ ಪೋಸ್ಟರ್​ ವಿರುದ್ಧ ನೆಟ್ಟಿಗರ ಆಕ್ರೋಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಾಜಿ ಟೆಲಿಫಿಲಮ್ಸ್‌ ಒಡತಿ ಏಕ್ತಾ ಕಪೂರ್ (Ekta Kapoor) ಕಸೌಟಿ ಜಿಂದಗಿ ಕೀ, ಕಹಾನಿ ಘರ್ ಘರ್ ಕಿ, ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ, ಬಡೇ ಅಚೇ ಲಗ್ತೇ ಹೈ, ಕಸಮ್ ಸೇ, ಪವಿತ್ರ ರಿಶ್ತಾ, ಕುಂಕುಮ್ ಭಾಗ್ಯ, ನಾಗಿನ್ ಮುಂತಾದ ಹಿಟ್ ಧಾರಾವಾಹಿಗಳನ್ನು ನೀಡಿದ್ದಾರೆ.

ಈವರೆಗೆ 134 ಧಾರಾವಾಹಿಗಳನ್ನು ನಿರ್ಮಾಣ ಮಾಡಿದ ಏಕ್ತಾ ಕಪೂರ್ , 38 ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಅದೇ ರೀತಿ 28 ವೆಬ್ ಸರಣಿಗಳನ್ನು (Web Series) ನಿರ್ಮಾಣ ಮಾಡಿದ್ದು, ಒಟಿಟಿ ಮತ್ತು ಸಿನಿಮಾ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಕೇವಲ ಸಿನಿಮಾ, ಧಾರಾವಾಹಿ ಮಾಡಿ ಏಕ್ತಾ ಸುಮ್ಮೆನೆ ಇದ್ದವರಲ್ಲ. ನಾನಾ ವಿವಾದಕ್ಕೂ ಅವರ ಹೆಸರು ಕೇಳಿಬರುತ್ತದೆ. ಈ ಹಿಂದೆ ಏಕ್ತಾ ಕಪೂರ್ ಹಾಗೂ ಅವರ ತಾಯಿ ಶೋಭಾ ಕಪೂರ್​ ‘XXX’ ಎಂಬ ವೆಬ್ ಸರಣಿಯಿಂದ ಬಹಳ ವಿವಾದಕ್ಕೆ ಸಿಲುಕಿ ಅವರ ಮೇಲೆ ಅರೆಸ್ಟ್​ ವಾರೆಂಟ್​ ಹೊರಡಿಸಲಾಗಿತ್ತು.

ಇದೀಗ ಏಕ್ತಾ ವಿರುದ್ಧ ಮತ್ತೊಂದು ಗಂಭೀರ ಆರೋಪ ಎದುರಾಗಿದೆ. ಈ ಬಾರಿ ಧಾರ್ಮಿಕ ನಂಬಿಕೆಯನ್ನು ಘಾಸಿಗೊಳಿಸಿರುವ ಆರೋಪ.

ಹೌದು. ಈ ಬಾರಿ ಲಕ್ಷ್ಮಿ ದೇವಿಯನ್ನು ಹೋಲುವ ಮಹಿಳೆಯನ್ನು ಅತ್ಯಂತ ಕೆಟ್ಟದ್ದಾಗಿ ಬಿಂಬಿಸಿರುವ ಆರೋಪ ಏಕ್ತಾಮೇಲಿದೆ. ಗಂಧೀ ಬಾತ್​ನ (Gandii Baat) 6ನೇ ಸರಣಿಯ ಪೋಸ್ಟರ್​ ಬಗ್ಗೆ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಈ ಪೋಸ್ಟ್​ನಲ್ಲಿ ತನ್ನ ಸೊಂಟದ ಬಳಿ ಕಮಲದ ಹೂವು ಮತ್ತು ಎರಡು ಬದಿಗಳಲ್ಲಿ ನವಿಲುಗಳೊಂದಿಗೆ ಬಾಯಿ ಮೇಲೆ ಬೆರಳಿಟ್ಟು ಹುಶ್​ ಎಂದು ಹೇಳುತ್ತಿರುವ ಭಂಗಿಯಲ್ಲಿ ಮಹಿಳೆಯ ಚಿತ್ರವಿದೆ. ಇದು ಥೇಟ್​ ಲಕ್ಷ್ಮಿದೇವಿಯನ್ನು ಹೋಲುವ ಚಿತ್ರವೆಂದು ನೆಟ್ಟಿಗರ ಅಭಿಮತ.

ಇದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಕೊಳಕು ಮಹಿಳೆಯನ್ನು ಕಮಲದ ಮೇಲೆ ಕುಳಿತುಕೊಳ್ಳುವಂತೆ ಮಾಡಲಾಗಿದೆ. ಇದು ಲಕ್ಷ್ಮೀ ದೇವಿಗೆ ಮಾಡಿ ಅಪಮಾನವಾಗಿದೆ. ನನಗೆ ಮಾತ್ರ ಇದು ಆಕ್ಷೇಪಾರ್ಹವೆಂದು ತೋರುತ್ತದೆಯೇ ಅಥವಾ ನಿಮ್ಮೆಲ್ಲರಿಗೂ ಆಕ್ಷೇಪಣೆಗಳಿವೆಯೇ? ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದು, ಅದಕ್ಕೆ ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಕಾಮಪ್ರಚೋದಕತೆಯನ್ನು ಅನ್ವೇಷಿಸುವ ಕಥಾಹಂದರವನ್ನು ಗಂಧೀ ಬಾತ್​ ಒಳಗೊಂಡಿದ್ದು, ಇದರಲ್ಲಿ ಲಕ್ಷ್ಮಿದೇವಿಗೆ ಮಾಡಿರುವ ಅವಮಾನವನ್ನು ಸಹಿಸುವುದಿಲ್ಲ ಎಂದು ಹಲವರು ಹೇಳುತ್ತಿದ್ದಾರೆ.

https://twitter.com/nshuklain/status/1668462800799137793?ref_src=twsrc%5Etfw%7Ctwcamp%5Etweetembed%7Ctwterm%5E1668462800799137793%7Ctwgr%5E1be54bf51ce810016de3a701b0fe1d5a37f75afd%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2Fnshuklain%2Fstatus%2F1668462800799137793%3Fref_src%3Dtwsrc5Etfw

ಇದೇ ಸಮಯದಲ್ಲಿ ವಿವಾದಾತ್ಮಕ ಗಂಧೀ ಬಾತ್​ ಸರಣಿಯು ಪ್ರಸ್ತುತ ತನ್ನ ಏಳನೇ ಸೀಸನ್ ಅನ್ನು ಸ್ಟ್ರೀಮ್ ಮಾಡುತ್ತಿದೆ ಮತ್ತು ಅದನ್ನು ಸಚಿನ್ ಮೋಹಿತೆ ಎಂಬುವರು ನಿರ್ದೇಶಿಸಿದ್ದಾರೆ. ಈ ಸರಣಿಯ ಪ್ರತಿಯೊಂದು ಸಂಚಿಕೆಯು ಗ್ರಾಮೀಣ ಭಾರತದ ಕಾಮಪ್ರಚೋದಕ ವಿಷಯದ ಕಥೆಯನ್ನು ಒಳಗೊಂಡಿದೆ. ಇದು ಜಿಯೋ ಸಿನಿಮಾದಲ್ಲೂ ಸ್ಟ್ರೀಮ್ ಆಗುತ್ತದೆ. ಆಲ್ಟ್​ ಬಾಲಾಜಿ ಒಟಿಟಿ ವೇದಿಕೆ ಏಕ್ತಾ ಕಪೂರ್‌ಗೆ ಸೇರಿದ್ದಾಗಿದ್ದು, ಅದರಿಂದ ಇಂಥ ಪೋಸ್ಟರ್​ ಮಾಡಲಾಗಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!