ದೇಶವಾಸಿಗಳಿಗೆ ಪ್ರಧಾನಿ ಮೋದಿ ಸಂದೇಶ: ಈ ತಿಂಗಳ ‘ಮನ್​ ಕಿ ಬಾತ್’​ ಈ ದಿನ ಪ್ರಸಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದಲ್ಲಿ ಕಳೆದ ೯ ವರ್ಷಗಳಿಂದ ಪ್ರತಿ ತಿಂಗಳ ಕೊನೆಯ ವಾರ ಪ್ರತಿಯೊಬ್ಬರ ಮನೆಗೆ ಬರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೇಡಿಯೊ ಕಾರ್ಯಕ್ರಮ ‘ಮನ್​ ಕಿ ಬಾತ್​’ ಈ ಬಾರಿ ತಿಂಗಳ ಮಧ್ಯದಲ್ಲಿ ನಡೆಯಲಿದೆ.

ಹೌದು, ಪ್ರತಿ ಬಾರಿ ಅದು ತಿಂಗಳ ಕೊನೇ ಭಾನುವಾರ ನಡೆಯುವ ಈ ಕಾರ್ಯಕ್ರಮ ಪ್ರಸಾರ , ಈ ತಿಂಗಳು ಜೂನ್ 18ರಂದು ನಿಗದಿ ಮಾಡಲಾಗಿದೆ.

ಈ ಕುರಿತು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಮಾಹಿತಿ ನೀಡಿದ್ದು,ಈ ತಿಂಗಳ ಮನ್​ ಕಿ ಬಾತ್​ ಕಾರ್ಯಕ್ರಮ ಜೂನ್ 18ರ ಭಾನುವಾರ ನಡೆಯಲಿದೆ. ನಿಮ್ಮ ಸಲಹೆಗಳು ಹಾಗೂ ಅಭಿಪ್ರಾಯಗಳನ್ನು ಸ್ವೀಕರಿಸುವುದು ಯಾವಾಗಲೂ ವಿಶೇಷ ಅನುಭವವಾಗಿರುತ್ತದೆ. ನೀವು ಕೊಡಬೇಕಾಗಿರುವ ಮಾಹಿತಿಗಳನ್ನು ನಮೋ ಆಪ್, ಮೈಗವ್​​ ಮೂಲಕ ಹಂಚಿಕೊಳ್ಳಿ ಅಥವಾ 1800-11-7800 ಗೆ ಡಯಲ್ ಮಾಡುವ ಮೂಲಕ ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡಿ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

https://twitter.com/narendramodi/status/1668627987917574145?ref_src=twsrc%5Etfw%7Ctwcamp%5Etweetembed%7Ctwterm%5E1668627987917574145%7Ctwgr%5E3090683628302f499b1227e185e9fab27d323704%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fvistaranews-epaper-vistaran%2Flatest-updates-latest%2F%3Fmode%3Dpwaaction%3Dclick

ಪ್ರತಿ ತಿಂಗಳ ಕೊನೆಯ ಭಾನುವಾರದಂದು ಮನ್ ಕಿ ಬಾತ್’ ಕಾರ್ಯಕ್ರಮ ನಡೆಯುತ್ತದೆ. ಆದ್ರೆ ಈ ಬಾರಿ ಜೂನ್ 21 ರಿಂದ 24 ರವರೆಗೆ ಪ್ರಧಾನಿ ಮೋದಿಯವರು ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. ಮೊದಲೇ ನಿಗದಿ ಮಾಡಿರುವ ಕಾರ್ಯಕ್ರಮವಾಗಿರುವ ಕಾರಣ ಅವರು ಮನ್​ ಕಿ ಬಾತ್ ಅನ್ನು ಮೊದಲೇ ಪೂರ್ಣಗೊಳಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!