ಹೊಸ ದಿಗಂತ ಡಿಜಿಟಲ್ ಡೆಸ್ಕ್
ನಾನೆಲ್ಲಾದರೂ ಕಾಂಗ್ರೆಸ್‌ಗೆ ಹೋಗ್ತೀನಿ ಅಂತ ಹೇಳಿದ್ದೇನಾ ? ಎಂದು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಚಿವ ವಿ. ಸೋಮಣ್ಣ ಸ್ಪಷ್ಟನೆ ನೀಡಿದ್ದರು. ಗೋವಿಂದರಾಜನಗರ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವದಂತಿಗಳಿಗೆ ನಾನು ಉತ್ತರ ಕೊಡಕ್ಕಾಗಲ್ಲ. ನಾನ್ಯಾಕೆ ವದಂತಿಗಳಿಗೆ ಉತ್ತರ ಕೊಡಲಿ? ಎಂದು ಪ್ರಶ್ನಿಸಿದರು.
ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಅಶೋಕ್, ಸೋಮಣ್ಣಗೆ ಯಾವುದೇ ಅಸಮಾಧಾನ ಇಲ್ಲ. ನಾನು ಸೋಮಣ್ಣ ಅವರ ಸಂಪರ್ಕದಲ್ಲಿ ಸತತವಾಗಿದ್ದೇನೆ. ಕಾಂಗ್ರೆಸ್‌ಗೆ ಹೋಗ್ತಾರೆ ಅಂತ ಇಲ್ಲ ಸಲ್ಲದ ಆರೋಪ ಮಾಡ್ತಿದಾರೆ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾವೆಲ್ಲ ಒಟ್ಟಾಗಿ ಇದ್ದೇವೆ. ಸೋಮಣ್ಣ ನಮ್ಮ ನಾಯಕ ಎಂದರು.
ಕರ್ನಾಟಕ ದಕ್ಷಿಣ ಭಾರತಕ್ಕೆ ಹೆಬ್ಬಾಗಿಲು. ಕರ್ನಾಟಕವನ್ನು ಗೆಲ್ಲಿಸುತ್ತೇವೆ, ನಮ್ಮ ವರಿಷ್ಠರು ಬರ್ತಿದಾರೆ. ಮತ್ತೆ ನಾವೇ ಗೆದ್ದು ಅಧಿಕಾರ ಹಿಡೀತೇವೆ. ಕಾಂಗ್ರೆಸ್ ಧೂಳೀಪಟ ಆಗಲಿದೆ ಎಂದರು.