Friday, March 31, 2023

Latest Posts

ಮೈಸೂರು ದಶಪಥ ಕಿತ್ತು ಬಂತಾ? ಸಂಸದ ಪ್ರತಾಪ್ ಸಿಂಹ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗಷ್ಟೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾಗಿದ್ದು, ಟೋಲ್ ಸಂಗ್ರಹ ವಿಚಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಈ ಮಧ್ಯೆ ಉದ್ಘಾಟನೆಯಾದ ಮರುದಿನವೇ ದಶಪಥ ರಸ್ತೆ ಕಿತ್ತು ಬಂದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದ್ದು, ಸಂಸದ ಪ್ರತಾಪ್ ಸಿಂಹ ಇದಕ್ಕೆ ಉತ್ತರಿಸಿದ್ದಾರೆ.

ಮಾಧ್ಯಮಗಳೇ ರಸ್ತೆ ಕಿತ್ತು ಬಂದಿಲ್ಲ, ಎಕ್ಸ್ಪಾನ್ಶನ್ ಜಾಯಿಂಟ್ ಬಳಿ ಇದ್ದ ಸಣ್ಣ ನ್ಯೂನತೆಯೊಂದನ್ನು ಸರಿಪಡಿಸಲಾಗುತ್ತಿದೆ ಅಷ್ಟೆ ಎಂದು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮವೊಂದರ ವರದಿಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ರಸ್ತೆ ಕಿತ್ತುಹೋಗಿದೆ, ಅಲ್ಲಿ ಪ್ರಯಾಣಿಸದಂತೆ ಬ್ಯಾರಿಕೇಡ್ ಹಾಕಿದ್ದಾರೆ, ಇದರಿಂದ ಸಾಕಷ್ಟು ಅವಘಡಗಳು ಸಂಭವಿಸಿದೆ, ವಾಹನಗಳು ಸ್ಕಿಡ್ ಆಗಿವೆ ಎಂದಿತ್ತು. ಇದಕ್ಕೆ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದು, ರಸ್ತೆ ಕಿತ್ತಿಲ್ಲ ಎಂದಿದ್ದಾರೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!