ಒಂದು ತಿಂಗಳು ಬ್ಯಾಟ್‌ ಮುಟ್ಟಿರಲಿಲ್ಲ: ಮನದ ಮಾತುಗಳನ್ನಾಡಿದ ವಿರಾಟ್ ಕೊಹ್ಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಟೀಂ ಇಂಡಿಯಾ ಸಕಲ ಸಿದ್ಧತೆ ನಡೆಸುತ್ತಿದ್ದು,ಇತ್ತ ವಿರಾಟ್ ಕೊಹ್ಲಿ ಕೂಡಾ ಫಾರ್ಮ್ ಗೆ ಮರಳಲು ಪರಿಶ್ರಮ ಪಡುತ್ತಿದ್ದಾರೆ.

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ವೇಳೆ ಕೆಲವು ಅಚ್ಚರಿಯ ಸಂಗತಿಗಳನ್ನು ಹೊರಹಾಕಿದ್ದಾರೆ. ಆ ಸಮಯ ಮಾನಸಿಕವಾಗಿ ಕುಗ್ಗಿರುವ ವಿಚಾರವನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ.

ಕಳೆದ ಕೆಲ ವರ್ಷಗಳಿಂದ ದೊಡ್ಡ ಇನಿಂಗ್ಸ್‌ ಕಟ್ಟಲು ಪದೇ ಪದೇ ವೈಪಲ್ಯ ಅನುಭವಿಸುತ್ತಲೇ ಬಂದಿದ್ದಾರೆ. ಇದರ ಬೆನ್ನಲ್ಲೇ ಕಳೆದ ಜುಲೈನಿಂದೀಚೆಗೆ ಕೊಹ್ಲಿ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆದಿದ್ದರು.
ತಾವಾಡಿದ ಕೊನೆಯ ಸರಣಿಯಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಒಂದು ಟೆಸ್ಟ್‌, 2 ಟಿ20 ಹಾಗೂ 2 ಏಕದಿನ ಪಂದ್ಯಗಳಿಂದ ಕೇವಲ 76 ರನ್‌ ಗಳಿಸಲಷ್ಟೇ ಶಕ್ತರಾಗಿದ್ದರು.

.ತಮ್ಮ ಆಕ್ರಮಣಶಾಲಿ ಮನೋಭಾವದ ಮೂಲಕ ಮೈದಾನದಲ್ಲಿ ಸಹ ಆಟಗಾರರನ್ನು ಹುರಿದುಂಬಿಸುತ್ತಿದ್ದ ವಿರಾಟ್ ಕೊಹ್ಲಿ, ತಾವು ಅನುಭವಿಸಿದ ಮಾನಸಿಕವಾಗಿ ಕುಗ್ಗಿದ್ದರಿಂದಲೇ ತಾವು ಅನಿವಾರ್ಯವಾಗಿ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆಯಲು ಮುಂದಾಗಿದ್ದನ್ನು ಒಪ್ಪಿಕೊಂಡಿದ್ದಾರೆ.

10 ವರ್ಷಗಳಲ್ಲಿ ನಾನು ಮೊದಲ ಬಾರಿಗೆ, ಒಂದು ತಿಂಗಳ ಕಾಲ ನನ್ನ ಬ್ಯಾಟ್ ಮುಟ್ಟಿರಲಿಲ್ಲ. ಈ ಸಮಯದಲ್ಲಿ ನಾನು ಇತ್ತೀಚೆಗೆ ತೀವ್ರತೆಯನ್ನು ಸ್ವಲ್ಪ ನಕಲಿ ಮಾಡಲು ಪ್ರಯತ್ನಿಸುತ್ತಿದ್ದೇನೆ ಎಂದು ನಾನು ಅರಿತುಕೊಂಡೆ. ನನ್ನ ಮನಸ್ಥಿತಿಗೆ ತಕ್ಕಂತೆ ನನ್ನ ದೇಹ ಸ್ಪಂದಿಸುತ್ತಿಲ್ಲವೆಂದು ಅರ್ಥವಾಯಿತು. ಕೆಲ ಕಾಲ ವಿಶ್ರಾಂತಿ ಪಡೆದು, ಆ ಬಳಿಕ ಕಮ್‌ಬ್ಯಾಕ್ ಮಾಡು ಎಂದು ನನ್ನ ಮನಸ್ಸು ಹೇಳುತ್ತಿತ್ತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ನಾನು ನೋಡಲು ಮಾನಸಿಕವಾಗಿ ಬಲಿಷ್ಠವಾಗಿಯೇ ಕಾಣುತ್ತೇನೆ. ಆದರೆ ಪ್ರತಿಯೊಬ್ಬರು ತಮ್ಮದೇ ಆದ ಇತಿಮಿತಿಗಳನ್ನು ಹೊಂದಿರುತ್ತಾರೆ. ನಾನು ನಮ್ಮ ಇತಿಮಿತಿಗಳನ್ನು ಅರಿತುಕೊಳ್ಳಬೇಕು. ಇಲ್ಲದಿದ್ದರೇ ಎಲ್ಲವೂ ಅಸ್ತವ್ಯಸ್ಥವಾಗುತ್ತದೆ.

ನಾನು ಬಿಡುವು ಪಡೆದುಕೊಂಡ ಸಮಯದಲ್ಲಿ ಸಾಕಷ್ಟು ಪಾಠಗಳನ್ನು ಕಲಿತುಕೊಂಡಿದ್ದೇನೆ. ಕೊನೆಗೂ ನಾನು ಎಲ್ಲಿ ಎಡವುತ್ತಿದ್ದೆ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ನಾನು ಮಾನಸಿಕವಾಗಿ ಕುಸಿದಿದ್ದೆ ಎಂದು ಹೇಳಲು ನನಗೇನು ನಾಚಿಕೆ ಎನಿಸುತ್ತಿಲ್ಲ. ಇದು ಜೀವನದಲ್ಲಿ ಸಾಮಾನ್ಯ ಪ್ರಕ್ರಿಯೆ, ಆದರೆ ನಾವು ಈ ವಿಚಾರವನ್ನು ಮಾತನಾಡಲು ಹಿಂಜರಿಯುತ್ತೇವೆ. ನಾವು ಮಾನಸಿಕವಾಗಿ ಕುಸಿದಿದ್ದೇವೆ ಎಂದು ತೋರ್ಪಡಿಸಿಕೊಳ್ಳಲು ಬಯಸುವುದಿಲ್ಲ. ಒಂದು ಸತ್ಯ ಹೇಳುತ್ತೇನೆ ಕೇಳಿ, ನಾನು ಬಲಿಷ್ಠವಾಗಿದ್ದೇವೆ ಎಂದು ಬಿಂಬಿಸಿಕೊಳ್ಳುವುದಕ್ಕಿಂತ, ದುರ್ಬಲರಾಗಿದ್ದೇವೆ ಎಂದು ಒಪ್ಪಿಕೊಳ್ಳುವುದು ಉತ್ತಮ ಎಂದು ಕೊಹ್ಲಿ ಮನಬಿಚ್ಚಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!