ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ ಚಂದ್ರಯಾನ-3 ಇತಿಹಾಸ ಸೃಷ್ಟಿಸಿದೆ. ಚಂದ್ರನ ಮೇಲೆ 14 ದಿನಗಳ ನಂತರ ವಿಕ್ರಮ್ ಹಾಗೂ ಪ್ರಗ್ಯಾನ್ ನಿದ್ದೆಗೆ ಜಾರಿದ್ದು,ಇದೀಗ ಎಚ್ಚರವಾಗುವ ಸಮಯ ಬಂದಿದೆ.
ಚಂದ್ರನಲ್ಲಿ ಇರುಳಾದಂತೆ ಸ್ಲೀಪ್‌ಮೋಡ್ ಜಾರಿದ್ದ ಪ್ರಗ್ಯಾನ್ ಹಾಗೂ ವಿಕ್ರಮ್ ಇಂದು ಎಚ್ಚರಗೊಳ್ಳಲಿದ್ಯಾ ಅಥವಾ ಫ್ರೀಜ್ ಮೋಡ್‌ಗೆ ಜಾರಲಿದೆಯಾ ಎಂದು ತಿಳಿದುಕೊಳ್ಳಲು ವಿಶ್ವವೇ ಕಾತರವಾಗಿದೆ.
ಇದೀಗ ಶಿವಶಕ್ತಿ ಪಾಯಿಂಟ್‌ನಲ್ಲಿರುವ ರೋವರ್ ಹಾಗೂ ಲ್ಯಾಂಡರ್ ಎಚ್ಚರವಾಗಲಿದೆ. ತಮ್ಮ ಸೌರಫಲಕಗಳ ಮೇಲೆ ಸೂರ್ಯನ ಬೆಳಕು ಬಿದ್ದ ನಂತರ ಕೆಲಸ ಆರಂಭಿಸಲಿವೆ.
ಸೆ.22 ರಂದು ಅಂತಿಮವಾಗಿ ಬೆಳಕು ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ತಲುಪುತ್ತದೆ. ಚಂದ್ರಯಾನ-3 ಜೊತೆಗಿನ ಸಂಪರ್ಕವನ್ನು ಮರುಸ್ಥಾಪಿಸಲು ಇಸ್ರೋ ವಿಜ್ಞಾನಿಗಳು ಸಿದ್ಧತೆ ನಡೆಸಿದ್ದಾರೆ.