ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರಿಟನ್‌ನಲ್ಲಿ ಸಿಗರೇಟ್ ನಿಷೇಧಿಸಲು ಪ್ರಧಾನಿ ರಿಷಿ ಸುನಕ್ ಚಿಂತನೆ ನಡೆಸಿದ್ದಾರೆ.
2009ರ ಜನವರಿ 1 ರಂದು ಅಥವಾ ಅದರ ನಂತರ ಜನಿಸಿರುವವರಿಗೆ ಸಿಗರೇಟ್ ಮಾರಾಟ ಮಾಡುವುದನ್ನು ನಿಷೇಧಿಸಲು ಚಿಂತನೆ ನಡೆಸಿದ್ದಾರೆ. ಇದರ ಜೊತೆಗೆ ಧೂಮಪಾನಿ ವಿರೋಧಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂದಿನ ಪೀಳಿಗೆ ಆರೋಗ್ಯವಾಗಿರಲಿ ಎನ್ನುವ ಆಶಯದಿಂದ ಯೂತ್ಸ್‌ಗೆ ಸಿಗರೇಟ್ ಬ್ಯಾನ್ ಮಾಡುವ ಸಾಧ್ಯತೆ ಇದೆ. ಈಗಾಗಲೇ ಸಿಗರೇಟ್ ಉತ್ಪಾದನಾ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಇನ್ನು ಗರ್ಭಿಣಿಯರಿಗೆ ಸಿಗರೇಟ್ ತ್ಯಜಿಸಲು ಪ್ರೋತ್ಸಾಹ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದಿದ್ದಾರೆ.