March 6, 2026
Friday, March 6, 2026
spot_img

ಒಪ್ಪಿಗೆ ಇಲ್ಲದೆ ಪತ್ನಿಯ ಗರ್ಭಕೋಶ ತೆಗೆಸಿದ್ರಾ ಗಾಯಕ ಉದಿತ್‌ ನಾರಾಯಣ್‌? ದೂರು ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಂಟ್ರವರ್ಸಿಗಳ ಮೂಲಕ ಆಗಾಗ ಸುದ್ದಿಯಲ್ಲಿರುವ ಪ್ಯಾನ್‌ ಇಂಡಿಯಾ ಗಾಯಕ ಉದಿತ್‌ ನಾರಾಯಣ್‌ ವಿರುದ್ಧ ಮಾಜಿ ಪತ್ನಿ ದೂರು ದಾಖಲಿಸಿದ್ದಾರೆ.

ಮೊದಲ ಪತ್ನಿ ರಂಜನಾ ದೂರು ದಾಖಲಿಸಿದ್ದು, ಉದಿತ್‌ ನಾರಾಯಣ್‌ ಹಾಗೂ ಅವರ ಸಹೋದರರು ಒಪ್ಪಿಗೆಯಿಲ್ಲದೇ ತಮ್ಮ ಗರ್ಭಕೋಶ ತೆಗೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬಿಹಾರದ ಠಾಣೆಯಲ್ಲಿ ದೂರು ದಾಖಲಾಗಿದೆ. 1996ರಲ್ಲಿ ತನ್ನ ಒಪ್ಪಿಗೆ ಇಲ್ಲದೆ ಗರ್ಭಕೋಶ ತೆಗೆಸಿದ್ದಾರೆ. ಈ ವಿಷಯ ನನಗೆ ಇತ್ತೀಚೆಗೆ ಗೊತ್ತಾಗಿದೆ ಎಂದಿದ್ದಾರೆ.

1984ರ ಡಿಸೆಂಬರ್ 7ರಂದು ಹಿಂದೂ ಪದ್ಧತಿ ಪ್ರಕಾರ ರಂಜನಾ ಹಾಗೂ ಉದಿತ್ ವಿವಾಹ ಆದರು. ಉದಿತ್ ಸಂಗೀತ ವೃತ್ತಿಯನ್ನು ಮುಂದುವರಿಸಲು 1985ರಲ್ಲಿ ಮುಂಬೈಗೆ ಸ್ಥಳಾಂತರಗೊಂಡರು. ಅಲ್ಲಿ ಅವರು ದೀಪಾ ನಾರಾಯಣ್ ಅವರನ್ನು ಮದುವೆ ಆಗಿದ್ದಾರೆ ಎಂದು ತಿಳಿದುಬಂದಿದೆ. ವೈದ್ಯಕೀಯ ಚಿಕಿತ್ಸೆ ನೆಪದಲ್ಲಿ ನಾರಾಯಣ್‌ ಸಹೋದರರು ಒಪ್ಪಿಗೆಯಿಲ್ಲದೆ ಗರ್ಭಕೊಶ ತೆಗೆಸಿದ್ದಾರೆ, ದೀಪಾ ನಾರಾಯಣ್‌ ಕೂಡ ಆಸ್ಪತ್ರೆಯಲ್ಲಿ ಇದ್ದರು ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !