October 10, 2026
Saturday, October 10, 2026
spot_img

MBBS ಡಿಗ್ರಿ ಪಡೆದ ನಟಿ ಶ್ರೀಲೀಲಾ, ಘಟಿಕೋತ್ಸವದ ವಿಡಿಯೋ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸ್ಯಾಂಡಲ್‌ವುಡ್‌ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಇದೀಗ ಟಾಲಿವುಡ್‌, ಕಾಲಿವುಡ್‌ ಮತ್ತು ಬಾಲಿವುಡ್‌ನಲ್ಲೂ ಮಿಂಚುತ್ತಿರುವ ನಟ ಶ್ರೀಲೀಲಾ ಹೊಸದೊಂದು ಸಾಧನೆ ಮಾಡಿದ್ದಾರೆ. ಹೌದು, ವೈದ್ಯಕೀಯ ವಿಭಾಗದಲ್ಲಿ ಪದವಿ ಓದುತ್ತದ್ದ ಶ್ರೀಲೀಲಾ, ನಟನೆ ಜೊತೆ ಜೊತೆಗೆ ಇದೀಗ ಎಂಬಿಬಿಎಸ್‌ ಡಿಗ್ರಿಯನ್ನು ಕಂಪ್ಲೀಟ್‌ ಮಾಡಿದ್ದಾರೆ.

ಘಟಿಕೋತ್ಸವದ ಗೌನ್ ಮತ್ತು ಟೋಪಿ ಧರಿಸಿ ವೈದ್ಯಕೀಯ ಪದವಿ ಸ್ವೀಕರಿಸುತ್ತಿರುವ ಶ್ರೀಲೀಲಾ ಅವರ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಮತ್ತು ಅಭಿಮಾನಿಗಳ ಗಮನ ಸೆಳೆದಿದೆ.

ಎಂಬಿಬಿಎಸ್‌ ಓದುವುದು ಸಾಮಾನ್ಯ ಸಂಗತಿಯಲ್ಲ. ಕಠಿಣವಾದ ಶ್ರಮವನ್ನು ಬೇಡುವ ವೈದ್ಯಕೀಯ ವ್ಯಾಸಂಗವನ್ನು, ತಮ್ಮ ಬ್ಯುಸಿ ಶೂಟಿಂಗ್ ಶೆಡ್ಯೂಲ್‌ಗಳ ನಡುವೆಯೂ ಕಂಪ್ಲೀಟ್‌ ಮಾಡಿದ್ದಾರೆ ಶ್ರೀಲೀಲಾ.

ಹೀಗೆ ಎರಡನ್ನೂ ಒಟ್ಟಿಗೆ ನಿಭಾಯಿಸಿರುವುದು ಈ ತಲೆಮಾರಿನ ನಟಿಯರಲ್ಲಿ ಅಪರೂಪದ ಸಂಗತಿಯಾಗಿದೆ. ಸಾಲು ಸಾಲು ಸಿನಿಮಾಗಳ ಶೂಟಿಂಗ್ ಮತ್ತು ಪ್ರಚಾರ ಕಾರ್ಯಗಳ ಸವಾಲುಗಳ ನಡುವೆಯೂ, ಶಿಸ್ತು ಮತ್ತು ಏಕಾಗ್ರತೆಯಿಂದ ಓದನ್ನು ಮುಗಿಸಿ ಶ್ರೀಲೀಲಾ, ಈಗ ಡಾಕ್ಟರ್ ಶ್ರೀಲೀಲಾ ಆಗಿ ಹೊರಹೊಮ್ಮಿದ್ದಾರೆ. ಘಟಿಕೋತ್ಸವದ ವಿಡಿಯೋಗಳು ಎಲ್ಲೆಡೆ ವೈರಲ್‌ ಆಗಿವೆ.

https://www.instagram.com/reels/DUngoFOEYLh

Must Read