PARENTING | ಪರೀಕ್ಷೆಯಲ್ಲಿ ಮಕ್ಕಳು ಫೇಲ್‌ ಆಗಿದ್ದಾರಾ? ಪೋಷಕರೇ ಈ ರೀತಿ ಮಾತ್ರ ರಿಯಾಕ್ಟ್‌ ಮಾಡ್ಬೇಡಿ..

ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ಎಷ್ಟೋ ಮಕ್ಕಳು ಪಾಸ್‌ ಆಗಿದ್ದರೆ, ಅಷ್ಟೇ ಮಕ್ಕಳು ಫೇಲ್‌ ಕೂಡ ಆಗಿರುತ್ತಾರೆ. ಫೇಲ್‌ ಆಗಿದ್ದಾರೆ ಎಂದ ಮಾತ್ರಕ್ಕೆ ಅವರನ್ನು ನಿಂದಿಸಬೇಡಿ. ಈ ರೀತಿಯಂತೂ ಮಾಡಲೇಬೇಡಿ..

ಚೆನ್ನಾಗಿ ಓದಿಲ್ಲ, ಯಾವುದಕ್ಕೂ ಉಪಯೋಗ ಇಲ್ಲ, ಬರೀ ಆಟ, ಟಿವಿ ಎಂದು ಬೈಬೇಡಿ. ನಿಮ್ಮಷ್ಟೇ ಶಾಕ್‌ ಅವರಿಗೂ ಕೂಡ ಆಗಿರುತ್ತದೆ.

ಕೆಲವು ಪೇರೆಂಟ್ಸ್‌ ಮಕ್ಕಳ ರಿಸಲ್ಟ್‌ನಿಂದ ತುಂಬಾ ಅಪ್‌ಸೆಟ್‌ ಆಗಿರುತ್ತಾರೆ. ಸಮಾಜಕ್ಕೆ ಭಯಬಿದ್ದು ಮಕ್ಕಳ ಮೇಲೆ ಕೋಪ ತೀರಿಸುತ್ತಾರೆ. ಹೊಡೆಯುವುದು, ಕತ್ತಲೆ ಕೋಣೆಯಲ್ಲಿ ಕೂಡಿ ಹಾಕ್ತಾರೆ. ಹೀಗೆ ಮಾಡ್ಬೇಡಿ.

ಬೇರೆ ಮಕ್ಕಳ ಜೊತೆ ಕಂಪೇರ್‌ ಮಾಡ್ಬೇಡಿ. ಎಲ್ಲರ ಐಕ್ಯೂ ಒಂದೇ ರೀತಿ ಇರೋದಿಲ್ಲ. ಮಕ್ಕಳಿಗೆ ಬೇಕಾದ ರೀತಿಯಲ್ಲಿ ನೀವು ಕೂಡ ಸಪೋರ್ಟ್‌ ಮಾಡದೇ ಇರಬಹುದಲ್ವಾ?

ನೀನು ದಡ್ಡ ಎಂದು ಲೇಬಲ್‌ ಮಾಡಬೇಡಿ. ಫ್ಯೂಚರ್‌ ಇಲ್ಲ ಎಂದು ರೇಗಬೇಡಿ.

ಮಕ್ಕಳ ಜೊತೆ ಮಾತನಾಡೋದನ್ನು ನಿಲ್ಲಿಸಬೇಡಿ. ಈ ಸಮಯದಲ್ಲಿ ನಿಮ್ಮ ಸಪೋರ್ಟ್‌ ಬೇಕು. ಆದರೆ ನೀವು ಮಾತನಾಡೋದು ನಿಲ್ಲಿಸಿದರೆ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!