ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿಯ ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡೋದೆ ಅನುಮಾನ. ಅಷ್ಟರಲ್ಲೇ ಅವರು ರಾಜೀನಾಮೆ ನೀಡುವ ಸಂದರ್ಭ ಬರಲಿದೆ ಎಂದು ಬಿಜೆಪಿ ಶಾಸಕ ಶ್ರೀವತ್ಸ ಭವಿಷ್ಯ ನುಡಿದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದರು ಅವರು, ಈ ಸಂದರ್ಭದಲ್ಲಿ ಮುಡಾ ವೆಬ್ ಸೈಟ್ ವಾಪಸು ನೀಡುವಂತೆ ಸಿಎಂ ಪತ್ನಿ ಪಾರ್ವತಿ ಬರೆದಿರುವ ಪತ್ರದ ಕುರಿತು ಪ್ರತಿಕ್ರಿಯಿಸಿದರು. ಇನ್ನು 10 ದಿನಗಳಲ್ಲಿ ಸರ್ಕಾರದ ನೀತಿಯಲ್ಲಿ ಹಲವು ಬದಲಾವಣೆ ಆಗಲಿದೆ. ಸಿಎಂ ಅವರ ಇವತ್ತಿನ ಸ್ಥಿತಿಗೆ ಅವರ ಸುತ್ತಲಿನ ಹಿತಶತ್ರುಗಳ ಸಲಹೆಗಳೇ ಕಾರಣ ಎಂದು ಅವರು ಹೇಳಿದ್ದಾರೆ.
ಸಿಎಂ ಪತ್ನಿ ಮುಡಾ ಸೈಟ್ ವಾಪಸ್ ಕೊಡುವ ಬಗ್ಗೆ ಪತ್ರ ಬರೆದಿದ್ದಾರೆ. ಅವರಿಗೆ ಮೂರು ತಿಂಗಳಿಂದ ತಮ್ಮ ಪತಿಯ ಮಾರ್ಯದೆ ಹೋಗ್ತಿದೆ ಎಂದು ಗೊತ್ತಾಗಲಿಲ್ವಾ? ಎಂದು ಪ್ರಶ್ನಿಸಿದ್ದಾರೆ.