ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಕಳಿಸಿಬಿಡ್ತಾ ಟರ್ಕಿ? ಸರ್ಕಾರ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದ ಜೊತೆಗಿನ ಉದ್ವಿಗ್ನತೆ ಮಧ್ಯೆ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಕಳುಹಿಸಲು ಟರ್ಕಿ ತಿರಸ್ಕರಿಸಿದೆ.

ಪಾಕಿಸ್ತಾನಕ್ಕೆ ಆರು ಶಸ್ತ್ರಾಸ್ತ್ರ ವಿಮಾನಗಳನ್ನು ಟರ್ಕಿ ಕಳುಹಿಸಿದೆ ಎಂಬ ಹೇಳಿಕೆಯನ್ನು ಸೋಮವಾರ ಅಧ್ಯಕ್ಷೀಯ ಸಂವಹನ ನಿರ್ದೇಶನಾಲಯ ನಿರಾಕರಿಸಿದೆ.

ಟರ್ಕಿಯಿಂದ ಬಂದ ಸರಕು ವಿಮಾನವು ಇಂಧನ ತುಂಬಿಸಲು ಪಾಕಿಸ್ತಾನದಲ್ಲಿ ಇಳಿಯಿತು. ನಂತರ ಅದು ತನ್ನ ಮಾರ್ಗದಲ್ಲಿ ಮುಂದುವರಿಯಿತು. ಅಧಿಕೃತ ಸಂಸ್ಥೆಗಳು ಬಿಟ್ಟು ಬೇರೆ ಯಾರಿಂದಲಾದರೂ ಊಹಾತ್ಮಕ ಹೇಳಿಕೆಗಳು, ಸುದ್ದಿಗಳು ಬಂದರೆ ಅವುಗಳನ್ನು ಪರಿಗಣಿಸಬಾರದು ಎಂದು ಟರ್ಕಿ ರಕ್ಷಣಾ ಸಚಿವಾಲಯ ತಿಳಿಸಿದೆ.

ಟರ್ಕಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಿದೆ ಎಂದು ಹಲವಾರು ಸುದ್ದಿವಾಹಿನಿಗಳು ವರದಿ ಮಾಡಿದ್ದವು. ಬಳಿಕ ಟರ್ಕಿ ಸರಕು ವಿಮಾನದ ಚಿತ್ರವನ್ನು ಪೋಸ್ಟ್ ಮಾಡಿ ಸ್ಪಷ್ಟನೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!