ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಸ್ಥಳೀಯರ ಕೈವಾಡ ಇರುವ ಕುರಿತು ಸಾಕಷ್ಟು ಅನುಮಾನಗಳು ಮೂಡಿದ್ದವು. ಈ ಅನುಮಾನ ಇದೀಗ ಖಚಿತವಾಗತೊಡಗಿದೆ. ಝಿಪ್‌ಲೈನ್ ಆಪರೇಟರ್ 3 ಬಾರಿ ʼಅಲ್ಲಾ ಹು ಅಕ್ಬರ್ʼ ಎಂದು ಕೂಗಿದ ನಂತರ ದಾಳಿ ಆರಂಭವಾಗಿದೆ. ಈ ಬಗ್ಗೆ ವಿಡಿಯೋವೊಂದು ಲಭ್ಯವಾಗಿದೆ.
ಉಗ್ರರ ದಾಳಿ ನಡುವೆ ಪ್ರವಾಸಿಗನೊಬ್ಬನನ್ನು ಜಿಪ್‌ಲೈನ್ ಸವಾರಿಗೆ ಕಳುಹಿಸಿದ ಆಪರೇಟರ್, ಅಲ್ಲಾಹು ಅಕ್ಬರ್ ಎಂದು 3 ಬಾರಿ ಘೋಷಣೆ ಕೂಗಿದ್ದಾನೆ. ಇದು ಅನುಮಾನಕ್ಕೆ ಕಾರಣವಾಗಿದೆ. ಗುಜರಾತ್ ಮೂಲದ ಪ್ರವಾಸಿಗರನ್ನು ಜಿಪ್‌ಲೈನ್ ಸವಾರಿಗೆ ಕಳುಹಿಸುವಾಗ ನಿರ್ವಾಹಕ ಮೂರು ಬಾರಿ ಅಲ್ಲಾಹು ಅಕ್ಬರ್ ಎಂದು ಕೂಗಿದ್ದಾನೆ. ಬಳಿಕ ಗುಂಡಿನ ದಾಳಿ ಶುರುವಾಗಿರುವುದು ಕಂಡು ಬಂದಿದೆ.
ಜಿಪ್‌ಲೈನ್ ಮೂಲಕ ವಿಡಿಯೋ ಮಾಡುತ್ತಾ ಸಾಗಿರುವ ಪ್ರವಾಸಿಗೆ ಕೆಲ ಹೊತ್ತಿನಲ್ಲಿ ಉಗ್ರ ದಾಳಿಯ ಬಗ್ಗೆ ಅರಿವಾಗಿದೆ. ಜಿಪ್‌ಲೈನ್ ಸವಾರಿ ಅಂತ್ಯಗೊಂಡ ಬೆನ್ನಲ್ಲೇ ಛಂಗನೆ ಹಾರಿ ಕುಟುಂಬದತ್ತ ಧಾವಿಸಿದ್ದಾನೆ. ಬಳಿಕ ಒಂದಂಡೆ ಉಗ್ರರು ಹಂತ ಹಂತವಾಗಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದರೆ, ಮತ್ತೊಂದೆಡೆ ಪತ್ನಿ ಹಾಗೂ ಕುಟುಂಬವನ್ನು ಕರೆದುಕೊಂಡು ಓಡಲು ಶುರು ಮಾಡಿದ್ದಾನೆ.
ಮುಖ್ಯದ್ವಾರ ಬಳಿ ಬಂದಾಗ ಸ್ಥಳೀಯರೊಬ್ಬರು ನೆರವು ನೀಡಿದ್ದಾರೆ. ನೆರವಿನಿಂದ ಆದಷ್ಟು ಬೇಗ ದಾಳಿ ನಡೆಯುವ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ವೇಳೆ ಭಾರತೀಯ ಸೇನೆ ನೆರವಿಗೆ ಧಾವಿಸಿದೆ. ಗುಂಡಿನ ದಾಳಿ ನಡೆದ 25 ನಿಮಿಷದಲ್ಲಿ ಭಾರತೀಯ ಸೇನೆ ಆಗಮಿಸಿ ಹಲವರನ್ನು ರಕ್ಷಿಸಿದೆ ಎಂದು ಪ್ರವಾಸಿಗ ಹೇಳಿದ್ದಾನೆ.
ಕಾಶ್ಮೀರಿ ಜಿಪ್ ಲೈನ್ ಆಪರೇಟರ್ ಬಗ್ಗೆ ನನಗೆ ಅನುಮಾನವಿದೆ. ಏಕೆಂದರೆ, ನಮ್ಮನ್ನು ಸವಾರಿಗೆ ಕಳುಹಿಸುವಾಗ ನಿರ್ವಾಹಕ ಮೂರು ಬಾರಿ ಅಲ್ಲಾಹು ಅಕ್ಬರ್ ಎಂದು ಕೂಗಿದ. ನಂತರ ಗುಂಡಿನ ದಾಳಿ ಶುರುವಾಗಿತ್ತು ಎಂದು ಪ್ರವಾಸಿಗ ರಿಶಿ ಭಟ್ ಅವರು ಹೇಳಿದ್ದಾರೆ.
ನನಗೂ ಮುನ್ನ 9 ಮಂದಿ ಸವಾರಿಗೆ ಹೋಗಿದ್ದರು. ಆ ವೇಳೆ ಆಪರೇಟರ್ ಒಂದು ಪದವನ್ನೂ ಮಾತನಾಡಿರಲಿಲ್ಲ. ನನ್ನ ಸವಾರಿ ಆರಂಭವಾಗುತ್ತಿದ್ದಂತೆಯೇ ಮೂರು ಬಾರಿ ಅಲ್ಲಾಹು ಅಕ್ಬರ್ ಎಂದು ಕೂಗಿದ್ದ. ನಂತರ ಗುಂಡಿನ ದಾಳಿ ಶುರುವಾಗಿತ್ತು. ನನಗೆ ಆತನ ಮೇಲೆ ಅನುಮಾನವಿದೆ. ಆಪರೇಟರ್ ಕಾಶ್ಮೀರಿ ವ್ಯಕ್ತಿಯಂತೇಯೇ ಕಾಣಿಸುತ್ತಿದ್ದ ಎಂದಿದ್ದಾರೆ.
#WATCH | #PahalgamTerroristAttack | In a viral video, a tourist was seen ziplining when terrorists suddenly started firing. The tourist from Gujarat’s Ahmedabad, Rishi Bhatt, recalls the incident.
“…Firing started when I was ziplining…I did not realise this for around 20… pic.twitter.com/TzauoM7kUe
— ANI (@ANI) April 28, 2025