Wednesday, February 21, 2024

BIG BOSS | ನಿಜ್ವಾಗ್ಲೂ ಸಂಗೀತಾಗೆ ವಿಶ್ ಮಾಡಿದ್ದಾರಾ ಯಶ್? ಅಸಲಿಯತ್ತು ಬಯಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಶ್ ನನ್ನ ಫೇವರೆಟ್, ಅವರ ಕಡೆಯಿಂದ ನನಗೊಂದು ವಿಶ್ ಮಾಡಿಸಿ ಎಂದು ಬಿಗ್‌ಬಾಸ್ ಮನೆಯಲ್ಲಿ ಸಂಗೀತಾ ತನ್ನ ಆಸೆಯನ್ನು ವ್ಯಕ್ತಪಡಿಸಿದ್ರು.

ಇದಾದ ಒಂದೇ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ನೂರು ದಿನದಿಂದ ಒಳಗಿದ್ದೀರಿ, ಯಾರ ಸಂಪರ್ಕವೂ ಇಲ್ಲದೇ ಇದ್ದೀರಿ, ನಿಮ್ಮ ಹವಾ ಜೋರಾಗಿದೆ ಅನ್ನೋದು ಗೊತ್ತಾಗಿದೆ. ಫೈನಲ್ಸ್‌ಗೆ ಬಂದಿದ್ದೀರಿ, ನೀವು ನನ್ನ ಅಭಿಮಾನಿ ಅಂತ ಗೊತ್ತಾಯ್ತು ಶುಭವಾಗಲಿ ಎಂದು ಯಶ್ ಹೇಳಿದ್ದಾರೆ. ಇದನ್ನು ಸಂಗೀತಾ ಇನ್ಸ್ಟ್ರಾಗ್ರಾಮ್ ಪೇಜ್‌ನಲ್ಲಿಯೂ ಹಂಚಿಕೊಳ್ಳಲಾಗಿದೆ.

 

View this post on Instagram

 

A post shared by @sangeetha_official_fan_page

ಆದರೆ ಈ ವಿಡಿಯೋ ಫೇಕ್, ಇದರಲ್ಲಿ ಎಲ್ಲಿಯೂ ಯಶ್ ಸಂಗೀತಾ ಹೆಸರನ್ನು ಹೇಳೇ ಇಲ್ಲ. ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಕಾರ್ಯಕ್ರಮದ ಸ್ಪರ್ಧಿ ಪ್ರತೀಕ್ಷಾಗೆ ಮಾಡಿದ ವಿಶ್ ಇದಾಗಿದೆ. ಇದನ್ನು ಸಂಗೀತಾ ಫ್ಯಾನ್ಸ್ ಅವರಿಗೆ ಮಾಡಿರುವ ವಿಶ್ ಎನ್ನುವಂತೆ ಎಡಿಟ್ ಮಾಡಿ ಅಪ್‌ಲೋಡ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!