Wednesday, October 5, 2022

Latest Posts

ಮಹೇಶ್ ಭಟ್ ನಿಜವಾದ ಹೆಸರು ʼಅಸ್ಲಾಂʼ, ಆತ ತನ್ನ ನಿಜ ಧರ್ಮ ಮರೆಮಾಚಿದ್ದಾರೆ: ಕಂಗನಾ ಕಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಬಾಲಿವುಡ್‌ ಚಿತ್ರ ನಿರ್ಮಾಪಕ ಮಹೇಶ್ ಭಟ್ ವಿರುದ್ಧ ಸಿಡಿದೆದ್ದಿರುವ ಕಂಗನಾ ರಾಣಾವತ್, ಭಟ್‌ ಜೀವನದ ಕುರಿತಾದ ಕೆಲವು ಆಘಾತಕಾರಿ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಮಹೇಶ್‌ ಭಟ್‌ ರ ನಿಜವಾದ ನಿಜವಾದ ಹೆಸರು ಮಹೇಶ್ ಭಟ್‌ ಅಲ್ಲ, ʼಅಸ್ಲಾಂʼ ಎಂಬುದು ಅವರ ನಿಜವಾದ ನಾಮಧೇಯ. ಆದರೆ ಈ ವಿಚಾರವನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ ಎಂದು ಕಂಗನಾ  ಆರೋಪಿಸಿದ್ದಾರೆ.
ಮಹೇಶ್ ಭಟ್ ಅವರ ಹಳೆಯ ವೀಡಿಯೊಗಳ ಪೋಸ್ಟ್‌ಗಳನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಕಂಗನಾ, ಮಹೇಶ್ ಮತ್ತು ಅವರ ʼನಿಜವಾದ ಹೆಸರುʼ ಮತ್ತು ಧರ್ಮದ ಬಗ್ಗೆ ಸರಣಿ ಆರೋಪಗಳನ್ನು ಮಾಡಿದ್ದಾರೆ.
ಮಹೇಶ್ ಜಿ ಆಕಸ್ಮಿಕವೆಂಬಂತೆ ಮತ್ತು ಅಷ್ಟೇ ಕಲಾತ್ಮಕವಾಗಿ ಜನರನ್ನು ಹಿಂಸಾಚಾರಕ್ಕೆ ಪ್ರೇರೇಪಿಸುತ್ತಿದ್ದಾರೆ” ಎಂದು ಅವರು ಪೋಸ್ಟ್‌ಗಳಲ್ಲಿ ಒಂದಕ್ಕೆ ಶೀರ್ಷಿಕೆ ನೀಡಿದ್ದಾರೆ. ಅದೇ ವೀಡಿಯೊದ ಮತ್ತೊಂದು ಭಾಗದಲ್ಲಿ, “ನನಗೆ ಅವರ (ಮಹೇಶ್ ಭಟ್) ನಿಜವಾದ ಹೆಸರು ಅಸ್ಲಂ ಎಂದು ತಿಳಿದಿದೆ… ಅವರು ಎರಡನೇ ಹೆಂಡತಿ (ಸೋನಿ ರಜ್ದಾನ್) ಅವರನ್ನು ಮದುವೆಯಾಗಲು ಮತಾಂತರಗೊಂಡರು.. ಅಸ್ಲಾಂ ಎಂಬುದು ಸುಂದರವಾದ ಹೆಸರಲ್ಲವೇ? ಅದನ್ನು ಏಕೆ ಮರೆಮಾಚುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಮತ್ತೊಂದು ಕ್ಲಿಪ್ ನಲ್ಲಿ ಕೂಡ ಮಹೇಶ್ ಭಟ್ ರ ಮೇಲೆ ವಾಗ್ದಾಳಿ ನಡೆಸಲಾಗಿದೆ. ಅದರಲ್ಲಿ “ಅವರು ಮತಾಂತರಗೊಂಡ ಮೇಲೆ ತನ್ನ ನಿಜವಾದ ಹೆಸರನ್ನು ಬಳಸಬೇಕು, ಆದರೆ ಅದನ್ನು ಮರೆಮಾಚಿ ಮತ್ತೊಂದು ನಿರ್ದಿಷ್ಟ ಧರ್ಮವನ್ನು ಪ್ರತಿನಿಧಿಸುವಂತೆ ತೋರಿಸಿಕೊಳ್ಳಬಾರದು” ಎಂದು ಬರೆಯಲಾಗಿದೆ.
ಕಂಗನಾ ಮಹೇಶ್ ಭಟ್ ಅವರನ್ನು ಟಾರ್ಗೆಟ್ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ತಾನು ಮಹೇಶ್‌ ಭಟ್‌ ರ ಮಗಳು ಪೂಜಾ ಭಟ್ ಅವರ ಚಿತ್ರವನ್ನು ನಿರಾಕರಿಸಿದಾಗ ಭಟ್‌ ಅವರು ತನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ಕಂಗನಾ ಆರೋಪಿಸಿದ್ದರು.  ಕಂಗನಾ ಮಹೇಶ್ ಭಟ್ ಅವರ ಬೆಂಬಲದೊಂದಿಗೆ (ಚಿತ್ರದ ನಿರ್ಮಾಪಕ) 2006 ರ ಗ್ಯಾಂಗ್‌ಸ್ಟರ್ ಗ್ಯಾಂಗ್‌ಸ್ಟರ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಆ ಬಳಿಕ ಹಲವಾರು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿಂದ ಅವರ ನಡುವೆ ಶತೃತ್ವ ಹೊಗೆಯಾಡುತ್ತಿದೆ.
ಈ ವರ್ಷದ ಆರಂಭದಲ್ಲಿ, ಮಹೇಶ್ ಭಟ್ ಮಗಳು ಆಲಿಯಾ ಭಟ್ ಚಿತ್ರ `ಗಂಗೂಬಾಯಿ ಕಥಿಯಾವಾಡಿ` ಬಿಡುಗಡೆಗೆ ಮುನ್ನ ಸಹ ಕಂಗನಾ ಪರೋಕ್ಷವಾಗಿ ಕೆಣಕಿದ್ದರು. ಆಗ ಕಂಗನಾ ಪರೋಕ್ಷವಾಗಿ ಆಲಿಯಾಗೆ ʼಡ್ಯಾಡಿʼಸ್ ಏಂಜೆಲ್‌ʼ ಮತ್ತು ಮಹೇಶ್ `ಮೂವಿ ಮಾಫಿಯಾ` ಎಂದು ಕರೆದು ವ್ಯಂಗ್ಯವಾಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!