CINE | ನೀವು ಆ ಸಿನಿಮಾ ಮಾಡಿರ್ಲಿಲ್ಲಾ ಅಂದ್ರೆ.. ವಿಜಯ್ ಕೆನ್ನೆಗೆ ಕಿಸ್ ಮಾಡಿದ ಶಾಹಿದ್ ಕಪೂರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೇಜಾನ್ ಪ್ರೈಮ್‌ನ ಈವೆಂಟ್ ಒಂದರಲ್ಲಿ ಶಾಹಿದ್ ಕಪೂರ್ ಹಾಗೂ ವಿಜಯ್ ದೇವರಕೊಂಡ ಒಂದೇ ವೇದಿಕೆ ಏರಿ ಎಲ್ಲರಿಗೂ ಖುಷಿ ನೀಡಿದ್ದಾರೆ.

ಸಿನಿಮಾವೊಂದರ ಬಗ್ಗೆ ಮಾತನಾಡುತ್ತಾ ಶಾಹಿದ್ ವಿಜಯ್‌ರನ್ನ ಹಗ್ ಮಾಡಿ ಕೆನ್ನೆಗೆ ಮುತ್ತಿಟ್ಟು ಥ್ಯಾಂಕ್ಸ್ ಹೇಳಿದ್ದಾರೆ.

ಬಾಲಿವುಡ್‌ನಲ್ಲಿ ಸಾಲು ಸಾಲು ಸೋಲು ಎದುರಿಸಿದ್ದ ಶಾಹಿದ್ ಕಪೂರ್ ಕಮ್ ಬ್ಯಾಕ್ ಸಿನಿಮಾ ಕಬೀರ್ ಸಿಂಗ್, ಇದು ತೆಲುಗು ಅರ್ಜುನ್ ರೆಡ್ಡಿ ರಿಮೇಕ್. ತೆಲುಗಿನಲ್ಲಿ ವಿಜಯ್ ಮಾಡಿದ ಪಾತ್ರವನ್ನೇ ಹಿಂದಿಯಲ್ಲಿ ಶಾಹಿದ್ ಕಪೂರ್ ಮಾಡಿದ್ದರು.

ಸಿಕ್ಕಾಪಟ್ಟೆ ಯಶಸ್ಸು ಕಂಡಿದ್ದ ಸಿನಿಮಾ ಆದರೂ ಹಿಂದಿಯಲ್ಲಿಯೂ ಸಿಕ್ಕಾಪಟ್ಟೆ ಹೆಸರು ಮಾಡಿ ಶಾಹಿದ್‌ಗೆ ಬೆಸ್ಟ್ ಕಮ್ ಬ್ಯಾಕ್ ನೀಡಿತ್ತು. ನೀವು ಅರ್ಜುನ್ ರೆಡ್ಡಿ ಮಾಡದೇ ಇದ್ದಿದ್ದರೆ ನಾನು ಕಬೀರ್ ಸಿಂಗ್ ಆಗೋಕೆ ಆಗ್ತಿರ್ಲಿಲ್ಲ. ಥ್ಯಾಂಕ್ಯೂ ಎಂದು ಹಗ್ ಮಾಡಿ ಮುತ್ತು ಕೊಟ್ಟು ಪ್ರೀತಿ ವ್ಯಕ್ತಪಡಿಸಿದ್ದಾರೆ.

 

View this post on Instagram

 

A post shared by Varinder Chawla (@varindertchawla)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!