ನಿಮ್ಮ ಮನೆ ಕಟ್ಟೋಕೆ ಈ ವಸ್ತುಗಳನ್ನು ಬಳಸಿದ್ರಾ?

ಮೂವರು ಅಣ್ಣ ತಮ್ಮ ಇದ್ದರು. ಅಕ್ಕಪಕ್ಕದ ಸೈಟುಗಳಲ್ಲಿ ಮನೆ ಕಟ್ಟಿಕೊಳ್ಳಲು ಅವರು ನಿರ್ಧರಿಸಿದ್ದರು. ಒಂದೇ ತಾಯಿಯ ಮಕ್ಕಳಾದರೂ ಮೂವರ ವ್ಯಕ್ತಿತ್ವ ವಿಭಿನ್ನವಾಗಿತ್ತು. ಮೊದಲನೆಯವನಿಗೆ ತುಂಬಾ ಅವಸರ, ತನ್ನ ಮನೆ ಬೇಗ ಆಗಬೇಕು ಎಂದು ನಿರ್ಧರಿಸಿ ಬೆತ್ತ, ಹುಲ್ಲು ಬಳಸಿ ಮನೆ ಕಟ್ಟಲು ಆರಂಭಿಸಿದ.

ಎರಡನೆಯವನಿಗೆ ಅತೀ ಬುದ್ಧಿ, ಮೊದಲನೆಯವನ ಮನೆ ಬಿರುಗಾಳಿಗೆ ಬಿದ್ದು ಹೋಗುತ್ತದೆ. ತಾನು ಎರಡು ದಿನ ಹೆಚ್ಚಾದರೂ ಪರವಾಗಿಲ್ಲ, ಮಣ್ಣಿನ ಮನೆ ಕಟ್ಟೋಣ ಎಂದು ನಿರ್ಧರಿಸಿದ. ಎರಡು ದಿನ ಬಿಟ್ಟು ಮನೆಯನ್ನೂ ಕಟ್ಟಿದ. ಮೂರನೇಯವನಿಗೆ ದೂರದ ಆಲೋಚನೆ ಹಾಗೂ ತಾಳ್ಮೆ ಇತ್ತು. ಆದ ವರ್ಷವಾದರೂ ಪರವಾಗಿಲ್ಲ, ಸಿಮೆಂಟ್, ಜಲ್ಲಿಕಲ್ಲು, ಮಣ್ಣು ಎಲ್ಲವನ್ನೂ ಹಾಕಿ ಸುಸಜ್ಜಿತವಾದ ಮನೆ ಕಟ್ಟಲು ಆರಂಭಿಸಿದ.

ಮೊದಲನೆಯವರು ಹಾಗೂ ಎರಡನೇಯವರು ಮೂರನೇಯವರನ್ನು ನೋಡಿ, ಈತನ ಮನೆ ಸದ್ಯಕ್ಕೆ ಆಗೋದಿಲ್ಲ, ಎಂದು ಆಡಿಕೊಂಡು ನಕ್ಕರು. ವರ್ಷದ ನಂತರ ಅವರಿದ್ದ ಪ್ರದೇಶದಲ್ಲಿ ಜೋರು ಮಳೆ, ಪ್ರವಾಹ ಆರಂಭವಾಯ್ತು. ಬಿರುಗಾಳಿಗೆ ಮನೆಗಳು ಬಿದ್ದು ಹೋದವು. ಮೂರನೇಯವನ ಮನೆ ಮಾತ್ರ ಇದ್ದಂತೆಯೇ ಇತ್ತು. ಈ ಇಬ್ಬರೂ ಆತನ ಮನೆಯಲ್ಲಿ ಆಶ್ರಯ ಪಡೆದರು.

ತಾಳ್ಮೆ ಮತ್ತು ಪರಿಶ್ರಮದ ಹಾದಿ ಯಾವಾಗಲೂ ಕಷ್ಟ. ಆದರೆ ಅದರ ಫಲ ಸಿಹಿ. ಯಾರು ಏನಾದರೂ ಹೇಳುತ್ತಾರೆ ಎಂದು ತಲೆಕೆಡಿಸಿಕೊಂಡರೆ ನಿಮ್ಮ ಸಾಧನೆ ಮಾಡಲು ಸಾಧ್ಯವಿಲ್ಲ. ಆಚೆ ಈಚೆ ನೋಡದೇ ನಿಮ್ಮ ಕೆಲಸ ನೀವು ಮಾಡಿಕೊಂಡು ಬನ್ನಿ…

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!