ಹೊಸದಿಗಂತ ವರದಿ ಕಲಬುರಗಿ:
ಜನವರಿ 22 ಕ್ಕೆ ರಾಮ ಮಂದಿರ ಉದ್ಘಾಟನೆಗೆ ಹೋಗುವ ಪ್ಲ್ಯಾನ್ ಇಲ್ಲ.ಆದರೆ, ಉದ್ಘಾಟನೆಯ ನಂತರ ಯಾವತ್ತೊ ಒಂದು ದಿನ ರಾಮಮಂದಿರಕ್ಕೆ ಹೋಗಿ ಬರುತ್ತೇನೆ ಎಂದು ಮಾಜಿ ಡಿಸಿಎಂ,ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.
ಬುಧವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನನಗೆ ರಾಮಂಮದಿರಕ್ಕೆ ಹೊಗಬೇಕು ಎಂದೇನಿಲ್ಲ.ಯಾಕಂದರೇ ನನ್ನ ಹೆಸರಲ್ಲೆ ಲಕ್ಷ್ಮಣ ಅಂತ ಇದೆ ಎಂದು ಹೇಳಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೈದರಾಬಾದ್ ಕರ್ನಾಟಕ , ಮುಂಬೈ ಕರ್ನಾಟಕದಲ್ಲಿನ ಎಲ್ಲಾ ಸ್ಥಾನಗಳನ್ನು ಗೆಲ್ಲಲಿದ್ದೇವೆ. ಬಿಜೆಪಿಯವರು 28 ಗೆಲ್ಲುತ್ತೇವೆ ಎಂದು ಹೇಳುತ್ತಾರೆ.ಪಕ್ಕದ ರಾಜ್ಯದ 2 ಸ್ಥಾನ ಸೇರಿ 30 ಗೆಲ್ಲುತ್ತೇವೆ ಅಂತಾನು ಹೇಳುತ್ತಾರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ದಕ್ಷಿಣದತ್ತ ಚಿತ್ತ ಹರಿಸಿರುವ ವಿಚಾರಕ್ಕೆ ರಿಯಾಕ್ಟ್ ಮಾಡಿದ ಸವದಿ, ಚುನಾವಣೆ ಬಂದಾಗ ಮಾತ್ರ ಮೋದಿ ಬರುತ್ತಾರೆ. ಬರಗಾಲ, ಪ್ರವಾಹ ಬಂದಾಗ ಈ ಕಡೆ ಮುಖ ಸಹಿತ ಮಾಡುವುದಿಲ್ಲ ಎಂದು ಹೇಳಿದರು.