ನಾನು ಭಾರತ ವಿರೋಧಿ ಹೇಳಿಕೆ ನೀಡಿಲ್ಲ, ಅವಕಾಶ ಕೊಟ್ಟರೆ ಸಂಸತ್ತಿನೊಳಗೆ ಮಾತಾಡುತ್ತೇನೆ:ರಾಗಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಗುರುವಾರ ಸಂಸತ್ತಿಗೆ ಆಗಮಿಸುತ್ತಿದ್ದಂತೆ ಭಾರತೀಯ ಜನತಾ ಪಕ್ಷ ಯುನೈಟೆಡ್ ಕಿಂಗ್‌ಡಂನಲ್ಲಿ ನೀಡಿದ ಹೇಳಿಕೆಗಳಿಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್‌ ಗಾಂಧಿ “ನಾನು ಲಂಡನ್ ಸೆಮಿನಾರ್‌ನಲ್ಲಿ ಭಾರತ ವಿರೋಧವಾಗಿ ಏನನ್ನೂ ಮಾತನಾಡಲಿಲ್ಲ. ಅವರು ಅವಕಾಶ ನೀಡಿದರೆ ನಾನು ಸಂಸತ್ತಿನ ಒಳಗೆ ಮಾತನಾಡುತ್ತೇನೆ” ಎಂದು ಹೇಳಿದರು.

ಗಾಂಧಿಯವರ ವಿಷಯದಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಭಾರಿ ಘರ್ಷಣೆಗೆ ಸಂಸತ್ತು ಸಾಕ್ಷಿಯಾಗಿದೆ. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಅದಾನಿ-ಹಿಂಡೆನ್‌ಬರ್ಗ್ ಸಮಸ್ಯೆಯ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒತ್ತಾಯಿಸುತ್ತಿವೆ. ವಿದೇಶಿ ನೆಲದಲ್ಲಿ ಭಾರತವನ್ನು ಅವಮಾನಿಸಿರುವ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಬಿಜೆಪಿಯ ಒತ್ತಡದ ನಡುವೆಯೂ ಕಾಂಗ್ರೆಸ್ ಪಟ್ಟುಬಿಡುವ ಮನಸ್ಥಿತಿಯಲ್ಲಿಲ್ಲ, ರಾಹುಲ್ ಗಾಂಧಿ ಕ್ಷಮೆ ಕೇಳುವುದಿಲ್ಲ ಎಂದು ಮೊಂಡುತನ ಪ್ರದರ್ಶಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!