June 15, 2026
Monday, June 15, 2026
spot_img

ತಾಜ್ ಮಹಲ್ ಅನ್ನು ಷಹಜಹಾನ್ ಕಟ್ಟಿಲ್ಲವೇ? ಬರುತ್ತಿದೆ ನೋಡಿ ಹೊಸ ‘ದಿ ತಾಜ್ ಸ್ಟೋರಿ’ ಸಿನಿಮಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದ ಏಳನೇ ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಕುರಿತು ಸಿನಿಮಾ ಒಂದು ಮೂಡಿ ಬಂದಿದ್ದು, ಸಿನಿಮಾನಲ್ಲಿ ತಾಜ್ ಮಹಲ್​ ಬಗ್ಗೆ ಪ್ರಶ್ನೆ ಮಾಡಲಾಗಿದೆ. ತಾಜ್ ಮಹಲ್​​ನ ಡಿಎನ್​​ಎ ಪರೀಕ್ಷೆ ಆಗಬೇಕು ಎನ್ನಲಾಗಿದೆ. ಸಿನಿಮಾದ ಹೆಸರು ‘ದಿ ತಾಜ್ ಸ್ಟೋರಿ’ ಸಿನಿಮಾದ ಟ್ರೈಲರ್ ಇಂದು (ಅಕ್ಟೋಬರ್ 16) ಬಿಡುಗಡೆ ಆಗಿದೆ.

‘ದಿ ತಾಜ್ ಸ್ಟೋರಿ’ ಸಿನಿಮಾ ತಾಜ್ ಮಹಲ್​​ನ ಮೂಲ ಕುರಿತು ಪ್ರಶ್ನೆ ಮಾಡುವ ಸಿನಿಮಾ ಆಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ತಾಜ್ ಮಹಲ್ ಮೂಲದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಕೆಲವು ಮಾಧ್ಯಮಗಳಲ್ಲಿ ಆಗಾಗ್ಗೆ ಚರ್ಚೆಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ತಾಜ್ ಮಹಲ್ ಅನ್ನು ನಿಜವಾಗಿಯೂ ಷಹಜಹಾನ್ ಕಟ್ಟಿಸಿಲ್ಲ ಬದಲಿಗೆ ಅದೊಂದು ಶಿವ ಮಂದಿರ ಎಂಬ ವಾದಗಳು ಕೇಳಿ ಬರುತ್ತಲೇ ಇರುತ್ತವೆ. ಇದೀಗ ಇದನ್ನೇ ಇರಿಸಿಕೊಂಡು ‘ದಿ ತಾಜ್ ಸ್ಟೋರಿ’ ಹೆಸರಿನ ಸಿನಿಮಾ ಮಾಡಲಾಗಿದೆ.

https://www.google.com/search?q=The+Taj+Story+movie+trailer+released&rlz=1C1VDKB_enIN1140IN1140&oq=The+Taj+Story+movie+trailer+released&gs_lcrp=EgZjaHJvbWUyBggAEEUYOTIGCAEQRRg80gEHMzkxajBqN6gCALACAA&sourceid=chrome&ie=UTF-8#fpstate=ive&vld=cid:97a12008,vid:SJS_tdqmfAM,st:0

‘ದಿ ತಾಜ್ ಸ್ಟೋರಿ’ ಸಿನಿಮಾನಲ್ಲಿ ಪರೇಶ್ ರಾವಲ್, ತಾಜ್ ಮಹಲ್ ಗೆ ಪ್ರವಾಸಿಗರಿಗೆ ಮಾರ್ಗದರ್ಶನ ನೀಡುವ ಟೂರಿಸ್ಟ್ ಗೈಡ್ ಆಗಿ ನಟಿಸಿದ್ದಾರೆ.

ತಾಜ್ ಮಹಲ್ ಅನ್ನು ಷಹಜಹಾನ್ ಕಟ್ಟಿಸಿಲ್ಲ ಬದಲಿಗೆ ಅದೊಂದು ಶಿವ ಮಂದಿರ ಎಂಬುದು ಅವರ ನಂಬಿಕೆ. ಇದೇ ಕಾರಣಕ್ಕೆ ಅವರು ನ್ಯಾಯಾಲಯದ ಮೊರೆ ಹೋಗುತ್ತಾರೆ ತಾಜ್ ಮಹಲ್ ಮೂಲದ ಬಗ್ಗೆ ಪ್ರಕರಣ ದಾಖಲಿಸುತ್ತಾರೆ. ನ್ಯಾಯಾಲಯದಲ್ಲಿ ತಾಜ್ ಮಹಲ್ ವಾಸ್ತು ಶಿಲ್ಪ ಇತ್ಯಾದಿ ವಿವರಗಳನ್ನು ಇರಿಸಿಕೊಂಡು ತಾಜ್ ಮಹಲ್ ಷಹಜಾನ್ ಕಟ್ಟಿಸಿದ್ದಲ್ಲವೆಂದು ವಾದಿಸುತ್ತಾರೆ. ಕೊನೆಗೆ ನ್ಯಾಯಾಲಯದ ತೀರ್ಪು ಏನಾಗುಗಿರುತ್ತದೆ ಎಂಬುದು ತಿಳಿಯಲು ಸಿನಿಮಾ ವೀಕ್ಷಿಸಬೇಕು.

ಸಿನಿಮಾ ಅನ್ನು ತುಷಾರ್ ಅಮರೀಶ್ ಘೋಯಲ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಸಿಎ ಸುರೇಶ್ ಝಾ.

ಸಿನಿಮಾನಲ್ಲಿ ಪರೇಷ್ ರಾವಲ್ ಜೊತೆಗೆ ಝಾಕಿರ್ ಹುಸೇನ್, ಅಮೃತಾ ಖಾನ್ವಿಲ್ಕರ್ ಇನ್ನೂ ಹಲವರು ನಟಿಸಿದ್ದು, ಸಿನಿಮಾ ಅಕ್ಟೋಬರ್ 31 ರಂದು ಬಿಡುಗಡೆ ಆಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !