ನೀವು ಅಧಿಕ ತೂಕದ ಬಗ್ಗೆ ಚಿಂತೆ ಮಾಡುತ್ತಿದ್ದೀರಾ? ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಹೆಚ್ಚಿನ ಹಣವನ್ನು ಖರ್ಚು ಮಾಡದೆಯೇ ನೀವು ಮನೆಯಲ್ಲಿಯೇ ತೂಕವನ್ನು ಹೇಗೆ ಆರಾಮವಾಗಿ ಕಳೆದುಕೊಳ್ಳಬಹುದು ಎಂಬುದನ್ನು ನಾವು ನಿಮಗೆ ವಿವರಿಸುತ್ತೇವೆ. ಕೇವಲ 10 ದಿನಗಳಲ್ಲಿ 5 ಕೆಜಿ ತೂಕವನ್ನು ಹೇಗೆ ಕಳೆದುಕೊಳ್ಳಬಹುದು ಎಂಬುದರ ಕುರಿತು ಮಾಹಿತಿ ಇಲ್ಲಿದೆ.
ವಾಟರ್ ಥೆರಪಿ ಮೂಲಕ ತೂಕ ಇಳಿಸಿಕೊಳ್ಳಬಹುದು. ಬ್ರಿಟನ್ ನ ಫಿಟೈಸ್ ಕೋಚ್ ಶೌನ್ ವಾಕರ್ ವಾಟರ್ ಥೆರಪಿಯ ಕೆಲವೊಂದು ಪ್ರಯೋಗಗಳನ್ನು ಮಾಡಿದ್ದಾರೆ. ವಾಕರ್ ಹೇಳುವಂತೆ ವಾಟರ್ ಥೆರಪಿ ಚಿಕಿತ್ಸೆಯನ್ನು ಬಳಸಿಕೊಂಡು 10 ದಿನಗಳಲ್ಲಿ ನೀವು 4-5 ಕೆಜಿ ತೂಕವನ್ನು ಕಳೆದುಕೊಳ್ಳಬಹುದು ಎಂದು ವಾಕರ್ ಹೇಳುತ್ತಾರೆ.
ಪ್ರತಿಯೊಬ್ಬರೂ ವಿಭಿನ್ನ ಆಹಾರ ಪದ್ಧತಿ ಮತ್ತು ನಿದ್ರೆಯ ಸಮಯವನ್ನು ಹೊಂದಿರುವುದರಿಂದ, ಫಲಿತಾಂಶಗಳು ಸಹ ಬದಲಾಗುತ್ತವೆ.
ದೇಹದಲ್ಲಿ ಸಾಕಷ್ಟು ನೀರು ಇದ್ದಾಗ ದೇಹದ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ಇದು ಜೀರ್ಣಕ್ರಿಯೆಯನ್ನು ಸಹ ಸುಧಾರಿಸುತ್ತದೆ. ನೀವು ಸರಿಯಾದ ಚಯಾಪಚಯವನ್ನು ಹೊಂದಿದ್ದರೆ, ನಿಮ್ಮ ತೂಕವೂ ಕಡಿಮೆಯಾಗುತ್ತದೆ.