ತೂಕವನ್ನು ಸಮತೋಲನದಲ್ಲಿರಿಸಿಕೊಳ್ಳಲು ಆರೋಗ್ಯಕರ ಆಹಾರವನ್ನು ಸೇವಿಸುವುದು ಅತ್ಯಂತ ಮುಖ್ಯ. ಸರಿಯಾದ ಆಹಾರವನ್ನು ಆಯ್ಕೆ ಮಾಡುವುದು ಕೇವಲ ತೂಕವನ್ನು ಕಳೆಯಲು ಮಾತ್ರವಲ್ಲ, ದೈಹಿಕ ಆರೋಗ್ಯವನ್ನು ಉತ್ತಮಗೊಳಿಸಲು ಸಹ ಸಹಾಯ ಮಾಡುತ್ತದೆ.
ಕೊಕೊನಟ್
ಕೊಕೊನಟ್ ಉತ್ತಮ ಕೊಬ್ಬುಗಳನ್ನು ಹೊಂದಿದ್ದು, ದೀರ್ಘಕಾಲ ಸುಸ್ತಾಗದಂತೆ ಇದು ನೋಡಿಕೊಳ್ಳುತ್ತದೆ. ಇದು ಮೆಟಾಬೊಲಿಸಮ್ ವೇಗವನ್ನು ಹೆಚ್ಚಿಸುವುದರಿಂದ ಕೊಬ್ಬನ್ನು ಬೇಗ ಕರಗಿಸಬಹುದು.
ನಟ್ಸ್ ಮತ್ತು ಸೀಡ್ಸ್
ಬಾದಾಮಿ, ವಾಲ್ ನಟ್, ಚಿಯಾ ಸೀಡ್ಸ್, ಫ್ಲ್ಯಾಕ್ಸ್‌ಸೀಡ್ಸ್ ಮುಂತಾದವುಗಳಲ್ಲಿ ಪ್ರೋಟೀನ್ ಮತ್ತು ಒಮೇಗಾ-3 ಕೊಬ್ಬು ಅಂಶಗಳು ಇರುತ್ತವೆ. ಇವು ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ ಮತ್ತು ಅನಾವಶ್ಯಕ ತಿನ್ನುವಿಕೆಯನ್ನು ಕಡಿಮೆ ಮಾಡುತ್ತದೆ.
ಹಸಿರು ಸೊಪ್ಪು
ಸಬ್ಬಸ್ಸಿಗೆ ಸೊಪ್ಪು, ಪಾಲಕ್, ಮೆಂತ್ಯೆ ಸೊಪ್ಪು ಮುಂತಾದ ಹಸಿರು ಎಲೆ ತರಕಾರಿಗಳು ಕಡಿಮೆ ಕ್ಯಾಲೊರಿ ಹೊಂದಿದ್ದು, ಇವು ದೇಹವನ್ನು ಡಿಟಾಕ್ಸ್ ಮಾಡುವುದು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಮೊಟ್ಟೆ ಹಾಗೂ ಹೋಲ್ ಗ್ರೇನ್ಸ್
ಮೊಟ್ಟೆ ಪ್ರೋಟೀನ್ ಮತ್ತು ವಿಟಮಿನ್‌ಗಳಿಂದ ಸಮೃದ್ಧವಾಗಿದೆ, ಇದು ಬೆಳಗಿನ ಉಪಾಹಾರಕ್ಕೆ ಉತ್ತಮ ಆಯ್ಕೆಯಾಗಿದೆ. ಹೋಲ್ ಗ್ರೇನ್ಸ್ ಗಳಾದ ಓಟ್ಸ್, ಬ್ರೌನ್ ರೈಸ್ ಮುಂತಾದವು ನಿಧಾನವಾಗಿ ಜೀರ್ಣಕ್ರಿಯೆಯ ಶಕ್ತಿಯನ್ನು ಹೊಂದಿದ್ದು, ಶರೀರಕ್ಕೆ ಅಗತ್ಯ ಎನರ್ಜಿ ನೀಡುತ್ತದೆ.
ಗ್ರೀನ್ ಟೀ
ಗ್ರೀನ್ ಟೀ ಆರೋಗ್ಯಕ್ಕೆ ತುಂಬಾ ಲಾಭಕಾರಿ. ಇದರಲ್ಲಿ ಆಂಟಿ-ಆಕ್ಸಿಡೆಂಟ್ಸ್ ಇರುತ್ತದೆ, ಇದು ಕೊಬ್ಬು ಕರಗಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಪ್ರತಿದಿನ 2 ಬಾರಿ ಗ್ರೀನ್ ಟೀ ಸೇವಿಸಿದರೆ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.