ದಿನಭವಿಷ್ಯ| ಇತರರ ವಿಷಯದಲ್ಲಿ ಮೂಗು ತೂರಿಸದಿರಿ..

ಮೇಷ
ವೃತ್ತಿಯಲ್ಲಿ ನಿಮ್ಮ  ಕಠಿಣ ಧೋರಣೆಯು ಸಮಸ್ಯೆ ಹುಟ್ಟಲು ಕಾರಣವಾಗುವುದು. ಅಸಹಕಾರ ಉಂಟಾದೀತು. ಹೊಂದಾಣಿಕೆ ಉತ್ತಮ.

ವೃಷಭ
ಇತರರ ವಿಷಯದಲ್ಲಿ ಮೂಗು ತೂರಿಸದಿರಿ. ಅವರು ಅದನ್ನು ಇಷ್ಟಪಡಲಾರರು. ಇದು ನಿಮ್ಮೊಳಗಿನ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಮಿಥುನ
ನಿಮ್ಮ ಸಾಮರ್ಥ್ಯಕ್ಕೆ ಸಾಧ್ಯವಾಗುವ ಕಾರ್ಯ ಮಾತ್ರ ಮಾಡಿರಿ. ಇಲ್ಲವಾದರೆ ಹಿನ್ನಡೆ ಕಾಣುವಿರಿ. ಖಾಸಗಿ ಸಂಬಂಧದಲ್ಲಿ ಏರುಪೇರು ಸಂಭವ.

ಕಟಕ
ಸಂಕೀರ್ಣ ವಿಷಯಗಳಲ್ಲಿ ನಿಮ್ಮ ಆತ್ಮಪ್ರಜ್ಞೆಯಂತೆ ನಡಕೊಳ್ಳಿ. ಅದು ಒಳಿತನ್ನೇ ತರಲಿದೆ. ಇತರರ ಸಲಹೆ ಕೇಳಿ ತಪ್ಪು ದಾರಿ ತುಳಿಯದಿರಿ.

ಸಿಂಹ
ದಿನವಹಿ ಕಾರ್ಯದಲ್ಲಿ ಬದಲಾವಣೆ ಬಯಸುವಿರಿ. ವೃತ್ತಿಯ ಒತ್ತಡ ಮರೆತು ಕೌಟುಂಬಿಕ ಕಾರ್ಯದಲ್ಲಿ ತೊಡಗಿ. ಆಪ್ತರ ಜತೆ ಸಂವಾದ.

ಕನ್ಯಾ
ಕೌಟುಂಬಿಕ ವಿಷಯವೊಂದು ನಿಮ್ಮ ಮನಶ್ಯಾಂತಿ ಕಲಕಬಹುದು. ಅದರ ಪರಿಹಾರಕ್ಕೆ ಆದ್ಯತೆ ಕೊಡಿ. ಅದನ್ನು ಹಾಗೇ ಕಡೆಗಣಿಸಬೇಡಿ.

ತುಲಾ
ವೃತ್ತಿಯಲ್ಲಿ ಮತ್ತು ಖಾಸಗಿ ಬದುಕಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಬಹುದು. ಖಾಸಗಿ ಬದುಕಲ್ಲಿ ನಿಮಗೆ ಪೂರಕ ಆಗದಿರಲೂಬಹುದು.

ವೃಶ್ಚಿಕ
ವೃತ್ತಿಯಲ್ಲಿ ನಿಮಗೆ ಸಿಕ್ಕುವ ಅವಕಾಶ ಸದುಪಯೋಗ ಮಾಡಿಕೊಳ್ಳಿ. ಪ್ರೀತಿಪಾತ್ರರಿಂದ ಭಾವನಾತ್ಮಕ ಪ್ರತಿಸ್ಪಂದನೆ.  ಖರ್ಚು ಹೆಚ್ಚಳ.

ಧನು
ಇತ್ತೀಚೆಗೆ ನಿಮ್ಮ ಆರೋಗ್ಯವನ್ನು ಕಡೆಗಣಿಸುತ್ತಿದ್ದೀರಿ. ತಿನ್ನುವ ವಿಷಯದಲ್ಲಿ ಹೆಚ್ಚು ನಿಯಂತ್ರಣ ಸಾಧಿಸಿ. ಬಾಯಿ ಚಪಲ ಒಳ್ಳೆಯದಲ್ಲ.

ಮಕರ
ಕೌಟುಂಬಿಕ ವಿಷಯಗಳಿಗೆ ಹೆಚ್ಚು ಗಮನ ಕೊಡಿ. ನಿಮ್ಮ ಆಪ್ತರನ್ನು ಕಡೆಗಣಿಸಬೇಡಿ.  ಆರ್ಥಿಕವಾಗಿ ಶುಭ ಬೆಳವಣಿಗೆ.

ಕುಂಭ
ಹಣದ ವಿಚಾರದಲ್ಲಿ ನಿಮಗೆ ಪೂರಕ ಬೆಳವಣಿಗೆ. ಆರ್ಥಿಕವಾಗಿ ಸದೃಢ ಪರಿಸ್ಥಿತಿ. ನೆರವು ಕೇಳಿ ಬಂದವರಿಗೆ ನಿರಾಶೆ ಮಾಡಬೇಡಿ.

ಮೀನ
ಅಧಿಕ ಕೆಲಸ. ಅದರ ಒತ್ತಡದಲ್ಲೆ ದಿನ ಕಳೆಯುವಿರಿ. ಹಾಗಾಗಿ ಇನ್ನಿತರ ಕೌಟುಂಬಿಕ ವಿಷಯಗಳಿಗೆ ಸಮಯ ಸಾಲದು. ಆರ್ಥಿಕ ಒತ್ತಡ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!