ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಅಪರಾಧ ಪತ್ತೆ ಹಚ್ಚುವಿಕೆ ಮತ್ತು ತನಿಖಾ ವ್ಯವಸ್ಥೆಯನ್ನು ಇನ್ನಷ್ಟು ವೇಗಗೊಳಿಸಲು ಗೃಹ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಅಪರಾಧ ನಡೆದ ಸ್ಥಳದಲ್ಲೇ ಅತ್ಯಂತ ನಿಖರವಾಗಿ ಮತ್ತು ತ್ವರಿತವಾಗಿ ಸಾಕ್ಷ್ಯಗಳನ್ನು ಸಂಗ್ರಹಿಸಲು ನೆರವಾಗುವ 32 ಅತ್ಯಾಧುನಿಕ ‘ಮೊಬೈಲ್ ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ’ (MFSL) ವಾಹನಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಹಸಿರು ನಿಶಾನೆ ತೋರಿಸಿದ್ದಾರೆ.
ಸ್ಥಳದಲ್ಲೇ ಸಾಕ್ಷ್ಯ ಸಂಗ್ರಹ:
ಇನ್ಮುಂದೆ ಅಪರಾಧ ನಡೆದ ಜಾಗಕ್ಕೆ ಈ ಸಂಚಾರಿ ಪ್ರಯೋಗಾಲಯಗಳು ನೇರವಾಗಿ ಭೇಟಿ ನೀಡಿ, ಡಿಜಿಟಲ್ ಹಾಗೂ ಭೌತಿಕ ಸಾಕ್ಷ್ಯಗಳನ್ನು ತಕ್ಷಣವೇ ಸಂಗ್ರಹಿಸಲಿವೆ. ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ಘಟಕಗಳ ಅಗತ್ಯಕ್ಕೆ ತಕ್ಕಂತೆ ಈ 32 ಮೊಬೈಲ್ ಲ್ಯಾಬ್‌ಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಫೊರೆನ್ಸಿಕ್ ವರದಿಗಳಿಗಾಗಿ ತಿಂಗಳುಗಟ್ಟಲೆ ಕಾಯುವ ತಾಪತ್ರಯ ತಪ್ಪಲಿದ್ದು, ಬಾಕಿ ಇರುವ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ.
ಇದನ್ನೂ ಓದಿ:
ಆಧುನಿಕ ತಂತ್ರಜ್ಞಾನದ ಬಲ
ಈ ಮೊಬೈಲ್ ಲ್ಯಾಬ್‌ಗಳಲ್ಲಿ ರಕ್ತದ ಮಾದರಿ, ಫಿಂಗರ್‌ಪ್ರಿಂಟ್ (ಬೆರಳಚ್ಚು), ಮತ್ತು ಇಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಸಂಗ್ರಹಿಸುವ ಹೈಟೆಕ್ ಉಪಕರಣಗಳಿವೆ. ಇದು ಕೋರ್ಟ್‌ಗಳಲ್ಲಿ ಅಪರಾಧಿಗಳಿಗೆ ಸೂಕ್ತ ಶಿಕ್ಷೆ ಕೊಡಿಸಲು ಪೊಲೀಸರಿಗೆ ದೊಡ್ಡ ಶಕ್ತಿಯಾಗಲಿದೆ.



