ಡಿಜಿಟಲ್ ಆರ್ಥಿಕತೆ ಭದ್ರತಾ ಬೆದರಿಕೆಗಳು ಮತ್ತು ಸವಾಲುಗಳನ್ನು ಎದುರಿಸುತ್ತಿದೆ-ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಂತ್ರಜ್ಞಾನ ಎಷ್ಟು ಹೊಸತಿದೆಯೋ ಅಷ್ಟೇ ಬೇಗ ಸೈಬರ್ ಅಪರಾಧಗಳು ಕೂಡ ಬರುತ್ತಿವೆ. ಡಿಜಿಟಲ್ ಆರ್ಥಿಕತೆಯು ಪ್ರಸ್ತುತ ಭದ್ರತಾ ಬೆದರಿಕೆಗಳು ಮತ್ತು ಸವಾಲುಗಳನ್ನು ಎದುರಿಸುತ್ತಿದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬೆಂಗಳೂರಿನಲ್ಲಿ ಶನಿವಾರ ನಡೆದ ಜಿ20 ಡಿಜಿಟಲ್ ಆರ್ಥಿಕ ಸಚಿವರ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ವಿಡಿಯೋ ಸಂದೇಶದ ಮೂಲಕ ಮಾತನಾಡಿದರು. ಈ ವೇಳೆ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಸುಸ್ಥಿರ ಡಿಜಿಟಲ್ ಆರ್ಥಿಕತೆಗಾಗಿ ಜಿ 20 ಉನ್ನತ ಮಟ್ಟದ ಮಾನದಂಡಗಳ ಕುರಿತು ಒಮ್ಮತವನ್ನು ನಿರ್ಮಿಸುವುದು ಅತ್ಯಗತ್ಯ ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತದಲ್ಲಿ ಡಿಜಿಟಲ್ ರೂಪಾಂತರದ ವಿಸ್ತಾರ, ವೇಗ ಮತ್ತು ವ್ಯಾಪ್ತಿಯನ್ನು ವಿವರಿಸಿದ ಪ್ರಧಾನಿ, 85 ಕೋಟಿ ಜನರು ಮೊಬೈಲ್ ಡೇಟಾ ಬಳಸುತ್ತಿದ್ದಾರೆ. ವಿಶ್ವದಲ್ಲಿಯೇ ಅತ್ಯಂತ ಕಡಿಮೆ ದರದಲ್ಲಿ ಡೇಟಾ ನೀಡುವ ದೇಶ ಭಾರತವಾಗಿದೆ. 2015ರಲ್ಲಿ ಆರಂಭಿಸಲಾದ ಡಿಜಿಟಲ್ ಇಂಡಿಯಾ ಯೋಜನೆಯ ಫಲವಾಗಿ ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದಲ್ಲಿ ಡಿಜಿಟಲ್ ಕ್ಷೇತ್ರದಲ್ಲಿ ಪರಿವರ್ತನೆ ಕಂಡಿದೆ ಎಂದರು.

ಆಡಳಿತವನ್ನು ಪರಿವರ್ತಿಸುವ ತಂತ್ರಜ್ಞಾನ ಗರಿಷ್ಠ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಜನ್ ಧನ್ ಬ್ಯಾಂಕ್ ಖಾತೆಗಳು, ಆಧಾರ್ ಮತ್ತು ಮೊಬೈಲ್‌ನಿಂದಾಗಿ ವ್ಯವಸ್ಥೆಯಲ್ಲಿನ ದೋಷಗಳನ್ನು ತಡೆಯಲು ನಮಗೆ ಸಾಧ್ಯವಾಗುತ್ತದೆ. ತೆರಿಗೆ ವ್ಯವಸ್ಥೆ ಸಂಪೂರ್ಣ ಡಿಜಿಟಲೀಕರಣಗೊಂಡಿರುವುದರಿಂದ ಪಾರದರ್ಶಕತೆ ಹೆಚ್ಚುತ್ತಿದ್ದು, ಇ-ಆಡಳಿತ ನಡೆಯುತ್ತಿದೆ ಎಂದರು.

G20 ವರ್ಚುವಲ್ ಗ್ಲೋಬಲ್ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕಾಗಿ ಸಾಮಾನ್ಯ ಚೌಕಟ್ಟಿನ ವಿನ್ಯಾಸವು ಪ್ರಗತಿಯಲ್ಲಿದೆ ಎಂದು ಮೋದಿ ಹೇಳಿದರು. ಎಲ್ಲರಿಗೂ ನ್ಯಾಯಯುತ, ಪಾರದರ್ಶಕ ಮತ್ತು ಜವಾಬ್ದಾರಿಯುತ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ಇದು ಸಹಾಯ ಮಾಡುತ್ತದೆ. ಪ್ರಸ್ತುತ ದೇಶದಲ್ಲಿ ಜನಧನ್ ಬ್ಯಾಂಕ್ ಖಾತೆಗಳ ಸಂಖ್ಯೆ 50 ಕೋಟಿ ದಾಟಿದೆ. ಈ ಪೈಕಿ ಶೇ.67 ರಷ್ಟು ಖಾತೆಗಳು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಾಗಿವೆ.  ಜನ್ ಧನ್ ಖಾತೆಗಳನ್ನು ದೊಡ್ಡ ಪ್ರಮಾಣದಲ್ಲಿ ತೆರೆಯುತ್ತಿರುವುದಕ್ಕೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಲ್ಲದೆ, ಇದರಲ್ಲಿ ಅರ್ಧದಷ್ಟು ಖಾತೆಗಳು ಮಹಿಳಾ ಶಕ್ತಿಗೆ ಸಂಬಂಧಿಸಿವೆ ಎಂದು ಪ್ರಧಾನಿ ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!