ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ನೈಲ್ ಕಟರ್ ನುಂಗಿದ್ದು ಎಂಟು ವರ್ಷದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಹೌದು, ಸರ್ಜಾಪುರದ ನಿವಾಸಿಯೊಬ್ಬ ಮದ್ಯದ ಅಮಲಿನಲ್ಲಿ ನೈಲ್ ಕಟರ್ ನುಂಗಿದ್ದ.
ಇದಾಗಿ ಎಂಟು ವರ್ಷಗಳಾಗಿದೆ, ಆತ ನೈಲ್ ಕಟರ್ ನುಂಗಿರುವುದನ್ನೇ ಮರೆತು ಹೋಗಿದ್ದ. ಆದರೆ ಇದೀಗ ಕೆಲ ದಿನಗಳ ಹಿಂದಿನಿಂದ ಹೊಟ್ಟೆ ನೋವು ಕಾಣಿಸಿತ್ತು.
ಹೊಟ್ಟೆ ನೋವು ವಿಪರೀತವಾಗಿದ್ದು, ಸ್ಕ್ಯಾನಿಂಗ್ ವೇಳೆ ಹೊಟ್ಟೆಯಲ್ಲಿ ವಸ್ತು ಇರುವುದು ಪತ್ತೆಯಾಗಿದೆ. ನಂತರ ಲ್ಯಾಪ್ರೊಸ್ಕೊಪಿ ಮೂಲಕ ನೈಲ್ ಕಟರ್ ಹೊರತೆಗೆಯಲಾಗಿದೆ.