ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷವಿಡೀ ಒಂದು ಜೊತೆ ಬಟ್ಟೆ ಕೊಡಿಸೋಕೂ ಹಿಂದೆಮುಂದೆ ನೋಡುವ ಕಂಜೂಸು ಅಣ್ಣಂದಿರಿಗಾಗಿ ರಾಖಿ ಹಬ್ಬದ ಸ್ಪೆಷಲ್ ಕ್ಯೂ ಆರ್ ಕೋಡ್ ಮೆಹೆಂದಿಯನ್ನು ಸಹೋದರಿಯರು ಹಾಕಿಸಿಕೊಳ್ತಿದ್ದಾರೆ.
ದುಡ್ಡು ಇಲ್ಲ, ಕ್ಯಾಶ್ ತಂದಿಲ್ಲ ಎಂದು ಕಥೆ ಹೇಳುವ ಅಣ್ಣಂದಿರಿಗಾಗಿ ಕ್ಯೂ ಆರ್ ಕೋಡ್ ಇರುವ ಮೆಹೆಂದಿಯನ್ನು ತಂಗಿಯರು ಹಾಕಿಸಿಕೊಳ್ತಿದ್ದು, ಅದನ್ನೇ ಸ್ಕ್ಯಾನ್ ಮಾಡಿ ಹಣ ಹಾಕಬಹುದಾಗಿದೆ.
ಈ ಹೊಸ ವಿಡಿಯೋ ಎಲ್ಲೆಡೆ ಟ್ರೆಂಡ್ ಸೃಷ್ಟಿ ಮಾಡಿದ್ದು, ಇನ್ನು ಯಾವೆಲ್ಲಾ ಕಾಲ ಬರಲಿದೆ ಎನ್ನುವಂತೆ ಮಾಡಿದೆ. ಅದೆಲ್ಲಾ ಸರಿ ನೀವು ಕ್ಯೂ ಆರ್ ಕೋಡ್ ಮೆಹೆಂದಿ ಹಾಕಿಸಿಕೊಳ್ತೀರಾ?
This is Peak Digital India Moment 😂🇮🇳🚀 pic.twitter.com/ciuVuObxcQ
— Ravisutanjani (@Ravisutanjani) August 29, 2023