January14, 2026
Wednesday, January 14, 2026
spot_img

ದಿನಭವಿಷ್ಯ: ಯಾರಿಗೇ ಆದರೂ ಅನಿವಾರ್ಯತೆಯನ್ನು ನೋಡಿ ಹಣ ನೀಡಿ, ಆತುರ ಒಳ್ಳೆಯದಲ್ಲ

ಮೇಷ.
ನಿಮ್ಮ ಉದ್ದೇಶ ಇಂದು ಈಡೇರುವ ಸಂಭವ. ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಿ. ನಿರ್ಣಾಯಕ ಕ್ಷಣದಲ್ಲಿ ಎಡವಬೇಡಿ.
ವೃಷಭ
ಕೌಟುಂಬಿಕ, ವೃತ್ತಿ ಮತ್ತು ಖಾಸಗಿ ವಿಚಾರಗಳೆಲ್ಲ ಇದಕ್ಕೆ ಕಾರಣ. ತಾಳ್ಮೆಯಿಂದ ವ್ಯವಹರಿಸಬೇಕು.
ಮಿಥುನ
ಕೌಟುಂಬಿಕ  ಬಿಕ್ಕಟ್ಟಿಗೆ ಪರಿಹಾರ ದೊರಕಲಿದೆ. ನಿಮ್ಮಿಂದ ಸಕಾರಾತ್ಮಕ ನಡೆನುಡಿ ಅವಶ್ಯ. ಅನ್ಯರು ಹರಡುವ ವದಂತಿಗೆ ಕಿವಿಗೊಡಬೇಡಿ.
ಕಟಕ
ಪರಿಸ್ಥಿತಿಯೊಂದು ನಿಮ್ಮ ನಿಯಂತ್ರಣ ಮೀರಿ ಸಾಗಬಹುದು. ಹೊಂದಾಣಿಕೆಗೆ ಸಿದ್ಧರಾಗಿರಿ. ಹಠಮಾರಿ ಧೋರಣೆ ಬೇಡ.
ಸಿಂಹ
ವೃತ್ತಿಯಲ್ಲಿ ನಿಮ್ಮ ನಿರ್ವಹಣೆ ಎಲ್ಲರ ಗಮನ ಸೆಳೆಯುವುದು. ವ್ಯಕ್ತಿಗತ ಸಮಸ್ಯೆಯೊಂದು ಸುಖಾಂತ್ಯ. ಮಾನಸಿಕ ನಿರಾಳತೆ, ನೆಮ್ಮದಿ.
ಕನ್ಯಾ
ವ್ಯವಹಾರದಲ್ಲಿ ಒಳಿತಾಗಲಿದೆ. ಆರ್ಥಿಕ ಉನ್ನತಿ. ಒಪ್ಪಿಕೊಂಡ ಕಾರ್ಯವೊಂದನ್ನು ಮುಗಿಸಬೇಕಾದ ಒತ್ತಡ.   ಸೂಕ್ತ ಸಹಕಾರ ಲಭ್ಯ.
ತುಲಾ
ಕೆಲವು ಕಾರ್ಯ ಇಂದೇ ಮುಗಿಸಬೇಕಾದ ಒತ್ತಡ. ವಿರಾಮಕ್ಕೆ ಅವಕಾಶ ಸಿಗದು. ಸಾಮಾಜಿಕ ಚಟುವಟಿಕೆ ಹೆಚ್ಚಲಿದೆ.
ವೃಶ್ಚಿಕ
ಕೆಲವರ ಜತೆ  ಮಾತಿನ ಚಕಮಕಿ ಸಂಭವ. ಹಾಗಾಗಿ ನೀವಿಂದು ಹೆಚ್ಚು ತಾಳ್ಮೆ ಪ್ರದರ್ಶಿಸಬೇಕು. ನಿರ್ಧಾರ ತಾಳುವಲ್ಲಿ ದುಡುಕಬೇಡಿ.
ಧನು
ನಿಮ್ಮ ಪಾಲಿಗೆ ಇಂದು ಎಲ್ಲವೂ ಸುಗಮ ವಾಗಿ ಸಾಗುವುದು. ಕಾರ್ಯ ಸಿದ್ಧಿ. ಪ್ರೀತಿಯಲ್ಲಿ ಸಕಾರಾತ್ಮಕ ಬೆಳವಣಿಗೆ. ಆರೋಗ್ಯ ತೃಪ್ತಿಕರ.
ಮಕರ
ನಿಮ್ಮ ಅಭೀಷ್ಟ ಈಡೇರುವುದು. ಇತರರಿಗೆ ಕೇಡು ಎಣಿಸದಿರಿ. ಅದರಿಂದ ನಿಮಗೇ ಪ್ರತಿಕೂಲ. ಧನಾಗಮ, ಆರ್ಥಿಕ ಉನ್ನತಿ.
ಕುಂಭ
ಭಾವನಾತ್ಮಕ ಏರುಪೇರು. ಸಂಗಾತಿ ಜತೆಗೆ ವಾಗ್ವಾದ ನಡೆದೀತು. ಏಕಾಗ್ರಚಿತ್ತತೆ ಕಷ್ಟ. ಹಣದ ನಷ್ಟವೂ ಸಂಭವಿಸಬಹುದು.
ಮೀನ
ಸಕಾಲದಲ್ಲಿ ಕಾರ್ಯ ಪೂರೈಸುವುದು. ಎಲ್ಲರೊಡನೆ ಉತ್ತಮ ಬಾಂಧವ್ಯ. ವೃತ್ತಿಯಲ್ಲಿ ಮೂಡಿದ್ದ ಅಸಮಾಧಾನ ನಿವಾರಣೆ. ನೆಮ್ಮದಿ.

Most Read

error: Content is protected !!