ಶ್ರೀಲಂಕಾದ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ದಿನೇಶ್ ಗುಣವರ್ಧನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟುಗಳ ನಡುವೆ ನೂತನ ಅಧ್ಯಕ್ಷರಾಗಿ ರಾನಿಲ್‌ ವಿಕ್ರಮ ಸಿಂಘೇ ಅಧಿಕಾರ ವಹಿಸಿಕೊಂಡಿದ್ದಾರೆ. ಅವರ ಬೆನ್ನಲ್ಲೇ ಸರ್ಕಾರದ ಇತರ ಜವಾಬ್ದಾರಿಯುತ ಸ್ಥಾನಗಳಿಗೆ ಇತರರನ್ನು ಆಯ್ಕೆ ಮಾಡಲಾಗಿದ್ದು ಲಂಕೆಯ ನೂತನ ಪ್ರಧಾನಿಯಾಗಿ ದಿನೇಶದ ಗುಣವರ್ಧನಾ ಅಧಿಕಾರವಹಿಸಿಕೊಂಡಿದ್ದಾರೆ.

ಎಪ್ಪತ್ತೆರಡು ವರ್ಷದ ದಿನೇಶ್ ಗುಣವರ್ಧನಾ ಸಂಸತ್ತಿನ ಸಭಾನಾಯಕರಾಗಿ, ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಈ ಹಿಂದಿನ ಗೋತಬಯ-ಮಹಿಂದ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರ ಮತ್ತು ಶಿಕ್ಷಣ ಸಚಿವರಾಗಿದ್ದರು. ಅವರ ಸರಳತೆಯನ್ನು ಶ್ರೀಲಂಕಾದ ಜನರು ನೆಚ್ಚಿಕೊಂಡಿದ್ದರು. ಉಚ್ಛಾಟಿತ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ನಿಕಟವರ್ತಿಯಾಗಿರುವ ಗುಣವರ್ಧನಾ ಅವರು 2015 ಮತ್ತು 2019 ರ ನಡುವೆ ಮೈತ್ರಿಪಾಲ ಸಿರಿಸೇನಾ ಮತ್ತು ವಿಕ್ರಮಸಿಂಘೆ ಅವರ ಆಡಳಿತದಲ್ಲಿ ವಿರೋಧ ಪಕ್ಷದಲ್ಲಿ ಕೂತು ಛಾಪುಮೂಡಿಸಿದ್ದರು. ಯುನೈಟೆಡ್ ಸ್ಟೇಟ್ಸ್ ಮತ್ತು ನೆದರ್ಲ್ಯಾಂಡ್ಸ್ನಲ್ಲಿ ಶಿಕ್ಷಣ ಪಡೆದ ದಿನೇಶ್ ಗುಣವರ್ಧನಾ ಅವರು ಟ್ರೇಡ್ ಯೂನಿಯನ್ ನಾಯಕರಾಗಿದ್ದಾರೆ ಮತ್ತು ಶ್ರೀಲಂಕಾದಲ್ಲಿ ಸಮಾಜವಾದದ ಪಿತಾಮಹ ಎಂದು ಕರೆಯಲ್ಪಡುವ ಅವರ ತಂದೆ ಫಿಲಿಪ್ ಗುಣವರ್ಧನ ಅವರಂತೆ ಹೋರಾಟದ ಹಿನ್ನೆಲಯನ್ನೂ ಹೊಂದಿದವರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!