ಹೊಸದಿಗಂತ ಡಿಜಿಟಲ್ ಡೆಸ್ಕ್
ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ದ್ವಿತೀಯ ಟಿ 20 ಪಂದ್ಯದಲ್ಲಿ 6 ವಿಕೆಟ್‌ಗಳ ರೋಚಕ ಜಯ ಸಾಧಿಸುವ ಮೂಲಕ ಟೀಂ ಇಂಡಿಯಾ 3 ಪಂದ್ಯಗಳ ಸರಣಿಯನ್ನು ಜೀವಂತವಾಗಿರಿಸಿದೆ.
ಮಳೆ ಕಾರಣದಿಂದ ಒದ್ದೆಯಾದ ಔಟ್‌ಫೀಲ್ಡ್‌ನಿಂದಾಗಿ ನಿಗದಿತ ಸಮಯಕ್ಕೆ ಆಟವನ್ನು ಪುನರಾರಂಭಿಸಲು ಸಾಧ್ಯವಾಗದ ಕಾರಣ ಪಂದ್ಯವನ್ನು 8 ಓವರ್ ಗಳಿಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಮ್ಯಾಥ್ಯೂ ವೇಡ್ (43) ಹಾಗೂ ನಾಯಕ ಫಿಂಚ್ (31) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ 90 ರನ್ ಗಳನ್ನು ಕಲೆಹಾಕಿತು. ಗೆಲ್ಲಲು 91 ರನ್‌ಗಳನ್ನು ಬೆನ್ನಟ್ಟಿದ ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 20 ಎಸೆತಗಳಲ್ಲಿ ಅಜೇಯ 46 ರನ್ ಸಿಡಿಸಿ ಭಾರತಕ್ಕೆ ನೆರವಾದರು. ಕೊನೆಯ ಓವರ್ ನಲ್ಲಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ ಎರಡು ಎಸೆತಗಳಲ್ಲಿ 6, 4 ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಗೆಲುವಿನ ನಂತರ ಮಾತನಾಡಿದ ದಿನೇಶ್ ಕಾರ್ತಿಕ್ ಹಲವಾರು ವಿಚಾರಗಳ ಕುರಿತಾಗಿ ಮಾತನಾಡಿದರು. “ರೋಹಿತ್ ಶರ್ಮಾ ಅದ್ಭುತವಾಗಿ ಆಡಿದರು. ಹೊಸ ಚೆಂಡಿನಲ್ಲಿ ವಿಶ್ವದರ್ಜೆಯ ಬೌಲರ್‌ಗಳ ವಿರುದ್ಧ ಇಂತಹ ಹೊಡೆತಗಳನ್ನು ಆಡುವುದು ಸುಲಭವಲ್ಲ. ರೋಹಿತ್ ಶರ್ಮಾ ಭಾರತೀಯ ಕ್ರಿಕೆಟ್ ಮಾತ್ರವಲ್ಲದೆ ವಿಶ್ವ ಕ್ರಿಕೆಟ್‌ನಲ್ಲಿ ಏಕೆ ಅಗ್ರಗಣ್ಯ ಆಟಗಾರ ಎಂಬುದನ್ನು ಇದು ತೋರಿಸುತ್ತದೆ. ವೇಗದ ಬೌಲಿಂಗ್‌ನಲ್ಲಿ ಆಡುವ ಅವರ ಸಾಮರ್ಥ್ಯವು ಅತ್ಯುತ್ತಮ ಗುಣಮಟ್ಟದ್ದಾಗಿದೆ ಎಂದಿದ್ದಾರೆ.
ನಾನು ಕ್ರೀಸ್ ಗೆ ಬಂದಾಗ ಬೌಲರ್ ಏನು ಮಾಡುತ್ತಿಸದ್ದಾರೆ ಎಂದು ರೋಹಿತ್ ನನಗೆ ಹೇಳಿದರು. ನಾನು ನನ್ನ ಯೋಜನೆಗಳನ್ನು ಹೊಂದಿದ್ದೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಎಲ್ಲಾ ಪರಿಸ್ಥಿತಿಗೆ ಸಿದ್ದರಾಗಿರಬೇಕಾಗುತ್ತಿದೆ. ನಾನು ಈ ರೀತಿಯ ಪರಿಸ್ಥಿತಿಗಳಲ್ಲಿ ಆಡಲು ಐಪಿಎಲ್ ವೇಳೆಯಿಂದ ಸಿದ್ಧತೆ ನಡೆಸಿದ್ದೇನೆ. ಗೆಲುವಿನ ರನ್‌ಗಳನ್ನು ಬಾರಿಸಲು ಅವಕಾಶ ಸಿಕ್ಕಿದ್ದು ಖುಷಿನೀಡಿದೆ. ಸರಣಿ 1-1 ರಲ್ಲಿ ಸಮಬಲಗೊಂಡಿದ್ದು ಸಂತಸ ತಂದಿದೆ ಎಂದಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಕಾರ್ತಿಕ್ ಚೆನ್ನಾಗಿ ಪಂದ್ಯವನ್ನು ಮುಗಿಸಿದ್ದಕ್ಕೆ ನನಗೆ ಖುಷಿಯಾಗಿದೆ ಎಂದು ಹೇಳಿದ್ದಾರೆ. ನಮಗೆ ಕೊನೇ ಓವರ್ ನಲ್ಲಿ ರಿಷಭ್ ಕಳುಹಿಸುವ ಆಲೋಚನೆ ಇತ್ತು ಆದರೆ ಸ್ಯಾಮ್ಸ್ ಆಫ್-ಕಟರ್‌ಗಳನ್ನು ಬೌಲ್ ಮಾಡಲಿದ್ದಾರೆ ಎಂದು ನಾನು ಭಾವಿಸಿದೆವು. ಹಾಗಾಗಿ ಡಿಕೆ ಒಳಗೆ ಬರಲಿ ಎಂದು ನಾನು ಭಾವಿಸಿದೆ ಮತ್ತು ಅವರು ಫಿನಿಶರ್ ಪಾತ್ರವನ್ನು ಅತ್ಯತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂದು ರೋಹಿತ್ ಪಂದ್ಯದ ನಂತರದ ಹೇಳಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ