ಹರತಾಳ ಹೆಸರಿನಲ್ಲಿ ಹಿಂಸಾಚಾರ: ಕೇರಳದಲ್ಲಿ ಪ್ರಕರಣಗಳೆಷ್ಟು? ಬಂಧಿತರೆಷ್ಟು?

ದಿಗಂತ ಡಿಜಿಟಲ್ ಡೆಸ್ಕ್:

ಪಿಎಫ್‌ಐ ಸಂಘಟನೆಗೆ ಸೇರಿದ ಕಚೇರಿಗಳು, ಮುಖಂಡರ ಮನೆಗಳಿಗೆ ಎನ್‌ಐಎ, ಇಡಿ ದಾಳಿ ಖಂಡಿಸಿ ಕೇರಳದಲ್ಲಿ ಶುಕ್ರವಾರ ಕರೆನೀಡಲಾದ ಹರತಾಳದ ವೇಳೆ ನಡೆದ ಹಿಂಸಾಚಾರ ಸಂಬಂಧ ಕೇರಳ ರಾಜ್ಯದಲ್ಲಿ ಬರೋಬ್ಬರಿ 157 ಪ್ರಕರಣಗಳು ದಾಖಲಾಗಿವೆ.

ಈ ಬಗ್ಗೆ ರಾಜ್ಯ ಪೋಲೀಸರು ಮಾಹಿತಿ ನೀಡಿದ್ದು, ವಿವಿಧ ಹಿಂಸಾಚಾರಗಳಲ್ಲಿ ಶಂಕಿತರಾದ 170ಮಂದಿಯನ್ನು ಬಂಧಿಸಲಾಗಿದೆ. ಇನ್ನು 368  ಮಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ. ಈ ಪೈಕಿ ಮಲಪ್ಪ್ಪುರಂ ಜಿಲ್ಲೆಯೊಂದರಲ್ಲೇ 15  ಪ್ರಕರಣಗಳಲ್ಲಿ ೫೬ ಜನರನ್ನು ಬಂಧಿಸಲಾಗಿದ್ದು, ಒಟ್ಟು128 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಈ ನಡುವೆ ಕೆಎಸ್ಸಾರ್ಟಿಸಿಗೆ ಆಗಿರುವ ಹಾನಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ಆಂಟನಿ ರಾಜು, ಸಾರ್ವಜನಿಕ ಆಸ್ತಿಯನ್ನು ಧ್ವಂಸ ಮಾಡಿದ್ದಕ್ಕಾಗಿ ದಾಳಿಕೋರರ ವಿರುದ್ಧ ಪಿಡಿಪಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕೆಎಸ್ಸಾರ್ಟಿಸಿಗೆ ಆಗಿರುವ ನಷ್ಟವನ್ನು ವಸೂಲಿ ಮಾಡಲು ಸಂಸ್ಥೆ ಕಾನೂನು ಕ್ರಮಕ್ಕೆ ಮುಂದಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!