ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್‌ರನ್ನು ನೋಡಲು ಇಂದು ದಿನಕರ್ ತೂಗುದೀಪ್ ಜೊತೆ ಪತ್ನಿ ವಿಜಯಲಕ್ಷ್ಮಿ ಆಗಮಿಸಿದ್ದಾರೆ.
ಪತಿಯನ್ನು ನೋಡಲು 5ನೇ ಬಾರಿ ಪತ್ನಿ ವಿಜಯಲಕ್ಷ್ಮಿ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದು, ಅತ್ತಿಗೆ ಜೊತೆ ದಿನಕರ್ ಕೂಡ ಆಗಮಿಸಿದ್ದಾರೆ. ಕಳೆದ ವಾರಾಂತ್ಯ ದರ್ಶನ್‌ಗೆ ಜ್ವರ ಇತ್ತು. ಇದೀಗ ಅವರು ಚೇತರಿಸಿಕೊಳ್ತಿದ್ದಾರೆ. ಈ ಹಿನ್ನೆಲೆ ಪತಿಯನ್ನು ಕಾಣಲು ವಿಜಯಲಕ್ಷ್ಮಿ ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಜೊತೆಗೆ ದರ್ಶನ್‌ರನ್ನು ಕಾಣಲು ವಿನೋದ್ ರಾಜ್ ಕೂಡ ಜೈಲಿನ ಬಳಿ ಕಾಯುತ್ತಿದ್ದಾರೆ.
ಅದಷ್ಟೇ ಅಲ್ಲ, ಮನೆ ಊಟ ದರ್ಶನ್‌ಗೆ ಕೊಡಲು ನ್ಯಾಯಾಲಯದ ತೀರ್ಪು ಇಂದು ಬರಬೇಕಿದೆ. ಕೋರ್ಟ್‌ನ ಆದೇಶಕ್ಕಾಗಿ ದರ್ಶನ್ ಕುಟುಂಬಸ್ಥರು ಎದುರು ನೋಡ್ತಿದ್ದಾರೆ.