ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವಂತ ಡಿನ್ನರ್ ಮೀಟಿಂಗ್ ದಿನಕ್ಕೊಂದು ತಿರುವು ಪಡೆಯುತ್ತಿವೆ. ಜಾರಕಿಹೊಳಿ ಡಿನ್ನರ್ ಪಾಲಿಟಿಕ್ಸ್ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು.
ಇದರ ಬೆನ್ನಲ್ಲೇ ನಾಳೆ (ಜನವರಿ 08) ಗೃಹ ಸಚಿವ ಪರಮೇಶ್ವರ್ ಎಸ್ಸಿ ಎಸ್ಟಿ ಶಾಸಕರು ಸಚಿವರ ಡಿನ್ನರ್ ಮೀಟಿಂಗ್ ಆಯೋಜನೆ ಮಾಡಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಆದ್ರೆ, ಹೈಕಮಾಂಡ್ ಇದೀಗ ಪರಮೇಶ್ವರ್ ಡಿನ್ನರ್ ಸಭೆಗೆ ಬ್ರೇಕ್ ಹಾಕಿದೆ.
ಕರ್ನಾಟಕ ಕಾಂಗ್ರೆಸ್ನಲ್ಲಿ ಡಿನ್ನರ್ ಪಾಲಿಟಿಕ್ಸ್ ಸಂಚಲನಕ್ಕೆ ಕಾರಣವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿದೇಶ ಪ್ರವಾಸದಲ್ಲಿರುವಾಗಲೇ ಇತ್ತ ಸಿಎಂ ಸಿದ್ದರಾಮಯ್ಯ ಸೇರದಿಂತೆ ಇತರೆ ಸಚಿವರು ಡಿನ್ನರ್ ಸಭೆ ಮಾಡಿದ್ದು, ಡಿಕೆಶಿ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೇ ವಿದೇಶದಿಂದ ವಾಪಸ್ ಬಂದ ಬಳಿಕ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.
ಇದರ ಬೆನ್ನಲ್ಲೇ ಎಚ್ಚೆತ್ತ ಹೈಕಮಾಂಡ್, ಗೃಹ ಪರಮೇಶ್ವರ್ ಅವರ ಕರೆದಿದ್ದ ಡಿನ್ನರ್ ಸಭೆಯನ್ನು ರದ್ದುಗೊಳಿಸುವಂತೆ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ನಾಳಿನ (ಜನವರಿ 08) ಪರಮೇಶ್ವರ್ ಅವರ ಮತ್ತೊಂದು ಡಿನ್ನರ್ ಸಭೆ ರದ್ದಾಗಿದೆ.
ಸಚಿವ ಪರಮೇಶ್ವರ್ ನಾಳೆ(ಜನವರಿ 08) ಡಿನ್ನರ್ ಸಭೆ ಕರೆದಿದ್ದರು. ಆದ್ರೆ, ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಮೊದಲ ಸಭೆ ಪಕ್ಷದಲ್ಲಿ ಕೋಲಾಹಲ ಎಬ್ಬಿಸಿದ್ದರಿಂದ ಇದೀಗ ಪರಮೇಶ್ವರ್ ಅವರ ಸಭೆ ರದ್ದು ಮಾಡಿವಂತೆ ಹೈಕಮಾಂಡ್ ಸೂಚಿಸಿದೆ.