ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಲ್ಡೀವ್ಸ್‌ಗೆ ಹೋಗಲು ಬಯಸುವವರಿಗೆ ಸಿಹಿಸುದ್ದಿ ಇಲ್ಲಿದೆ. ಅದೇನೆಂದರೆ ಬೆಂಗಳೂರಿನಿಂದ ಮಾಲ್ಡೀವ್ಸ್‌ಗೆ ತೆರಳಲು ನೇರ ವಿಮಾನ ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಮಾಲ್ಡೀವ್ಸ್ ಮೂಲದ ವಿಮಾನಯಾನ ಸಂಸ್ಥೆ ಮಾಂಟಾ ಏರ್ ಲೈನ್ಸ್ ಘೋಷಿಸಿದೆ.
2024ರ ಜನವರಿಯಿಂದ ಬೆಂಗಳೂರು ಹಾಗೂ ಮಾಲ್ಡೀವ್ಸ್ ನಡುವೆ ಹೊಸ ನೇರ ವಿಮಾನ ಸೇವೆ ಪ್ರಾರಂಭಿಸಲು ಸಜ್ಜಾಗಿದೆ. ಮಾಂಟಾ ವಿಮಾನಯಾನ ಸಂಸ್ಥೆಯ ವಿಮಾನಗಳು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಾಲ್ಡೀವ್ಸ್‌ನ ಧಾಲು ವಿಮಾನ ನಿಲ್ದಾಣಕ್ಕೆ ನೇರವಾಗಿ ಸಂಚಲಿಸಲಿದೆ.
ಈ ವಿಮಾನಗಳು ಆರಂಭಿಕ ಹಂತದಲ್ಲಿ ವಾರದಲ್ಲಿ ಮೂರು ದಿನಗಳು ಕಾರ್ಯನಿರ್ವಹಿಸಲಿದ್ದು, ಎಲ್ಲಾ ವಿಮಾನಗಳು ಬೆಳಿಗ್ಗೆ ಮಾಲ್ಡಿವ್ಸ್ ಗೆ ಹಾಗೂ ಸಂಜೆ ಮಾಲ್ಡಿವ್ಸ್ ನಿಂದ ಭಾರತಕ್ಕೆ ಪ್ರಯಾಣ ಬೆಳೆಸಲಿವೆ.
ಮಾಂಟಾ ಏರ್‌ನ ವಿಸ್ತರಣೆಯೊಂದಿಗೆ ಭಾರತದಿಂದ ಮಾಲ್ಡೀವ್ಸ್‌ಗೆ ಹೊಸ ನೇರ ವಿಮಾನ ಮಾರ್ಗ ಆರಂಭವಾಗಲಿದೆ.
ವೇಲಾನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎದುರಾಗುವ ತೊಂದರೆಗಳು ಹಾಗೂ ಹೆಚ್ಚುವರಿ ವೆಚ್ಚವನ್ನು ತಪ್ಪಿಸಲು ಹಾಗೂ ಧಾಲುನಲ್ಲಿರುವ ಅನೇಕ ಐಷಾರಾಮಿ ರೆಸಾರ್ಟ್‌ಗಳಿಗೆ ನೇರ ಪ್ರವೇಶವನ್ನು ಪಡೆಯಲು ಈ ವಿಮಾನಯಾನ ಅನುವು ಮಾಡಿಕೊಡುತ್ತದೆ.