ಇಸ್ರೇಲ್-ಹಮಾಸ್ ಕದನ ವಿರಾಮ ಅಂತ್ಯ, ಮತ್ತೆ ಘರ್ಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್ ಹಾಗೂ ಗಾಜಾ ನಡುವೆ ಇದ್ದ ತಾತ್ಕಾಲಿಕ ಕದನ ವಿರಾಮ ಮುಕ್ತಾಯವಾಗಿದ್ದು, ಮತ್ತೆ ಘರ್ಷಣೆ ಆರಂಭವಾಗಿದೆ.

ನವೆಂಬರ್ 24ರಂದು ನಾಲ್ಕು ದಿನಗಳ ಕದನ ವಿರಾಮ ಘೋಷಣೆಯಾಗಿತ್ತು. ಮತ್ತೆ ಅದನ್ನು ವಿಸ್ತರಣೆ ಮಾಡಲಾಗಿತ್ತು. ಇದೀಗ ವಿರಾಮ ಘೋಷಣೆಯಾಗಿ ಒಂದು ವಾರವಾಗಿದ್ದು, ಘರ್ಷಣೆ ಮತ್ತೆ ಆರಂಭವಾಗಲಿದೆ.

ಕದನವಿರಾಮ ಮುಗಿದಂತೆಯೇ ಆರೋಪ ಪ್ರತ್ಯಾರೋಪಗಳು ಆರಂಭವಾಗಿವೆ. ಬೆಳಗ್ಗೆ ಏಳು ಗಂಟೆಯೊಳಗೆ ಬಿಡುಗಡೆ ಮಾಡಲಿರುವ ಇಸ್ರೇಲ್ ಒತ್ತೆಯಾಳುಗಳ ಲಿಸ್ಟ್‌ನ್ನು ಹಮಾಸ್ ನೀಡಬೇಕಿತ್ತು.

ಆದರೆ ಅದು ನಮ್ಮ ಕೈ ತಲುಪಿಲ್ಲ ಎಂದು ಇಸ್ರೇಲ್ ದೂರಿದೆ. ಇಷ್ಟೇ ಅಲ್ಲದೆ ಸಾಕಷ್ಟು ಬಾರಿ ಕದನ ವಿರಾಮ ಉಲ್ಲಂಘಿಸಿದ್ದು, ಹೆಚ್ಚುವರಿಯಾಗಿ ಇಸ್ರೇಲ್ ಮೇಲೆ ರಾಕೆಟ್ ಹಾರಿಸಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!