ನವೆಂಬರ್ 14ರಿಂದ ಹುಬ್ಬಳ್ಳಿಯಿಂದ ದೆಹಲಿಗೆ ನೇರ ವಿಮಾನಸೇವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ರಾಜ್ಯ ವಾಣಿಜ್ಯ ನಗರಿ ಹುಬ್ಬಳ್ಳಿ ಜನರ ಕನಸು ನನಸಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಹುಬ್ಬಳ್ಳಿಯಿಂದ ರಾಜಧಾನಿ ದೆಹಲಿಗೆ  ಖಾಸಗಿ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಏರ್‌ಲೈನ್ಸ್‌ ನಿಂದ ವಿಮಾನ ಸೇವೆ ಒದಗಿಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದ್ದರು. ಅದರಂತೆ, ಮುಂಬರುವ ತಿಂಗಳು ಅಧಿಕೃತವಾಗಿ ವಿಮಾನಯಾನ ಸೇವೆ ಹುಬ್ಬಳ್ಳಿಯಿಂದ ಲಭ್ಯವಾಗಲಿದೆ. ಈ ಸೇವೆ ಪ್ರಾರಂಭವಾದಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ದೊಡ್ಡ ಮಟ್ಟಿಗೆ ಉತ್ತೇಜನ ಸಿಗಲಿದೆ.

ಈ ಕುರಿತು ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವ, ಇಂಡಿಗೋ ಏರ್‌ ಲೈನ್ಸ್‌ ಅಧಿಕಾರಿಗಳೊಂದಿಗೆ ಹುಬ್ಬಳ್ಳಿಯಿಂದ ದೆಹಲಿಗೆ ಪ್ರತಿ ನಿತ್ಯ ನೇರ ವಿಮಾನ ಸೇವೆ ಪ್ರಾರಂಭಿಸುವಂತೆ ಕೆಲವು ದಿನಗಳ ಹಿಂದೆ ಕೋರಿಕೊಳ್ಳಲಾಗಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅವರು ಇದೇ ನವೆಂಬರ್‌ 14, 2022ರಿಂದ ಪ್ರತಿ ನಿತ್ಯ ಈ ಸೇವೆ ಪ್ರಾರಂಭಿಸುವುದಾಗಿ ಘೋಷಿಸಿದರು. ಟಿಕೆಟ್‌ ಬುಕ್ಕಿಂಗ್‌ ಕೂಡ ಇಗಾಗಲೇ ಪ್ರಾರಂಭವಾಗಿದೆ ಎಂದು ತಿಳಿಸಿದ ಸಚಿವರು ಸೇವೆ ಪ್ರಾರಂಭಿಸಿದ ಇಂಡಿಗೋ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ತಿಳಿಸಿದರು.

ಪ್ರಸ್ತುತ ಹುಬ್ಬಳ್ಳಿಯಿಂದ ದೆಹಲಿ ಸಮೀಪದ ಹಿಂಡಾನ್ ವಿಮಾನ ನಿಲ್ದಾಣದವರೆಗೆ ವೈಮಾನಿಕ ಸೇವೆ ಚಾಲ್ತಿಯಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!