ಜಮ್ಮುವಿನಿಂದ ಮಾತಾ ವೈಷ್ಣೋದೇವಿ ದೇಗುಲಕ್ಕೆ ಇನ್ಮುಂದೆ ನೇರ ಹೆಲಿಕಾಪ್ಟರ್ ಸೇವೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪವಿತ್ರ ತಾಣಗಳಲ್ಲಿ ಒಂದಾದ ಮಾತಾ ವೈಷ್ಣೋದೇವಿ ದೇವಸ್ಥಾನಕ್ಕೆ ನೇರ ಹೆಲಿಕಾಪ್ಟರ್ ಸೇವೆ ಮಂಗಳವಾರದಿಂದ ಆರಂಭಗೊಂಡಿದ್ದು, ಒಂದೇ ದಿನದಲ್ಲಿ ದರುಶನ ಕೈಗೊಳ್ಳುವವರಿಗೆ ಇದು ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರ್ವತ ಮೇಲಿರುವ ಅತ್ಯಂತ ಪೂಜ್ಯ ಮತ್ತು ಪವಿತ್ರ ತಾಣಕ್ಕೆ ಕತ್ರಾ ಬೇಸ್​ ಕ್ಯಾಂಪ್​ನಿಂದ ಹೆಲಿಕಾಪ್ಟರ್​​ ಸೇವೆ ನಡೆಸುತ್ತಿತ್ತು. ಇದಕ್ಕೆ 2,100 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಇದೀಗ ಜಮ್ಮುನಿಂದ ಹೆಲಿಕಾಪ್ಟರ್ ಪ್ಯಾಕೇಜ್ ಆರಂಭಿಸಲಾಗಿದೆ. ಪ್ರತಿ ವ್ಯಕ್ತಿಗೆ ಒಂದು ದಿನಕ್ಕೆ 35000 ಸಾವಿರ ಹಾಗೂ ಎರಡು ದಿನಕ್ಕೆ 60 ಸಾವಿರದಂತೆ ಶುಲ್ಕ ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾರ್ಯಚರಣೆಯು ಜಮ್ಮು ವಿಮಾನ ನಿಲ್ದಾಣದಿಂದ ಬೆಳಗ್ಗೆ 11 ಗಂಟೆಗೆ ಹೊರೆಟು ಹತ್ತು ನಿಮಿಷದಲ್ಲಿ ಕಾತ್ರ ತಲುಪಲಿದೆ. ಇದರ ಮೂಲಕ ‘ದೇಗುಲಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವ ಹೊಣೆಗಾರಿಕೆ ಇದಾಗಿದೆ ಎಂದು ಶ್ರೀ ಮಾತಾ ವೈಷ್ಣೋ ದೇವಿ ದೇಗುಲ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಶುಲ್ ಗಾರ್ಗ್ ತಿಳಿಸಿದರು.
ದೇಗುಲ ಮಂಡಳಿ ಅಧ್ಯಕ್ಷ ಮತ್ತು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ನಿರ್ದೇಶನದ ಮೇರೆಗೆ ಹೊಸ ಹೆಲಿಕಾಪ್ಟರ್ ಸೇವೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾತ್ರಾರ್ಥಿಗಳಿಂದ ಕಾರ್ಯಾಚರಣೆಯ ಪ್ರತಿಕ್ರಿಯೆಯನ್ನು ಆಧರಿಸಿ, ಭವಿಷ್ಯದಲ್ಲಿ ಅದರ ವಿಸ್ತರಣೆಗಾಗಿ ಮಂಡಳಿಯನ್ನು ಸಂಪರ್ಕಿಸಲಾಗುವುದು ಎಂದು ಗಾರ್ಗ್ ಹೇಳಿದರು.

35 ಸಾವಿರದ ಒಂದು ದಿನದ ಪ್ಯಾಕೇಜ್​ನಲ್ಲಿ ಬೆಳಿಗ್ಗೆ ದೇವರ ದರುಶನಕ್ಕೆ ತೆರಳಿ ಅದೇ ದಿನ ಸಂಜೆ ಮರಳಿ ಕರೆತರಲಾಗುವುದು. ಇದರಲ್ಲಿ ಹೆಲಿಪ್ಯಾಡ್​ ಇರುವ ಪಂಚಿಯಿಂದ ಭವನದವರಿಗೆ ಬ್ಯಾಟರಿ ಕಾರಿನಲ್ಲಿ ಕರೆದುಕೊಂಡು ಹೋಲಾಗುವುದು. ಅಲ್ಲಿಂದ ರೋಪ್​ವೇನದಲ್ಲಿ ದರುಶನಕ್ಕೆ ತೆರಳುವುದು ಮತ್ತು ದರುಶನದ ಟಿಕೆಟ್​ ಎಲ್ಲವೂ ಒಳಗೊಂಡಿರುತ್ತದೆ ಎಂದು ಬೋರ್ಡ್ ಸಿಇಒ ಹೇಳಿದರು.

60 ಸಾವಿರ ಪ್ಯಾಕೇಜ್​ನಲ್ಲಿ ವಿಶೇಷ ಪೂಜೆಯಲ್ಲಿ ಭಾಗವಹಿಸುವ ಅವಕಾಶ, ಈ ಯೋಜನೆಯ ಪ್ರತಿ ದಿನ 25 ಜನರಿಗೆ ಸಿಗಲಿದೆ. ‘ಮುಂದಿನ ಎರಡು ತಿಂಗಳುಗಳು (ಮಾನ್ಸೂನ್ ಅವಧಿ) ನಮಗೆ ಮತ್ತು ಹೆಲಿಕಾಪ್ಟರ್ ಸೇವಾ ನಿರ್ವಾಹಕರಿಗೆ ಕಲಿಕೆಯ ಅವಕಾಶವಾಗಿದೆ, ಇದು ಸೇವೆಯನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಹೆಚ್ಚಿಸಲು ಸಹಾಯ ಮಾಡುತ್ತದೆ’ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!