ಹೊಸದಿಗಂತ ವರದಿ,ಗೋಕರ್ಣ:
ಪುರಾಣ ಪ್ರಸಿದ್ದ ಮಹಾಬಲೇಶ್ವರ ಮಂದಿರಕ್ಕೆ ಖ್ಯಾತ ಚಿತ್ರ ನಟ, ನಿರ್ದೇಶಕ ರಿಷಬ್ ಶೆಟ್ಟಿ ಗುರುವಾರ ಕುಟುಂಬ ಸಮೇತರಾಗಿ ಆಗಮಿಸಿ ಆತ್ಮಲಿಂಗದ ದರುಶನ ಮಾಡಿದರು.
ಬಳಿಕ ಮಂದಿರದ ವತಿಯಿಂದ ಸ್ಮರಣಿಕೆ, ಪ್ರಸಾದ ನೀಡಿ ಗೌರವಿಸಿದರು.
ಇದಕ್ಕೂ ಮೊದಲು ಮಹಾಗಣಪತಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇವೆರಡು ದೇವಾಲಯದ ಭೇಟಿ ಬಳಿಕ ತಾಮ್ರಗೌರಿ, ಸ್ಮಶಾನಕಾಳಿ ದೇವಾಲಯಕ್ಕೆ ತೆರಳಿ ದೇವಿ ದರುಶನ ಪಡೆದರು. ಈ ವೇಳೆ ಮಂದಿರದ ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು, ರಿಷಬ್ರವರ ಪತ್ನಿ ಪ್ರಗತಿ, ಮಕ್ಕಳಾದ ರನ್ವಿತ್, ರಾಧ್ಯಾ ಮತ್ತಿತರರು ಉಪಸ್ಥಿತರಿದ್ದರು.
ಸೆಲ್ಪಿಗೆ ಮುಗಿಬಿದ್ದ ಅಭಿಮಾನಿಗಳು
ತಮ್ಮ ನೆಚ್ಚಿನ ನಟನನ್ನು ನೋಡುತ್ತಿದ್ದಂತೆ ಭಕ್ತರು ಸೆಲ್ಪಿ ಪೋಟೋ ತೆಗೆಯಲು ಮುಗಿಬಿದ್ದರು. ಇನ್ನೂ ರಿಷಬ್ ಸಹ ನಗುತ್ತಲೇ ತನ್ನ ಅಭಿಮಾನಿಗಳಿಗೆ ಆತ್ಮೀಯವಾಗಿ ಮಾತನಾಡುತ್ತಾ ತೆರಳಿದರು.