ನಿರ್ದೇಶಕ ತರುಣ್ ಸುಧೀರ್ ಹೃದಯ ಗೆದ್ದ ಸೋನಲ್: ಸ್ಯಾಂಡಲ್‌ವುಡ್‌ ನಲ್ಲಿ ಮತ್ತೊಂದು ಮದುವೆ ಗೌಜಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡ ಖ್ಯಾತ ಖಳ ನಟ ಸುಧೀರ್ ಅವರ ಕಿರಿಯ ಪುತ್ರ, ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ನಿರ್ದೇಶಕ ತರುಣ್ ಸುಧೀರ್ ಮತ್ತು ಸ್ಯಾಂಡಲ್‌ವುಡ್‌ ನಟಿ ಸೋನಾಲ್ ಅವರು ಮದುವೆಯಾಗುತ್ತಿದ್ದು, ಆಗಸ್ಟ್ 10 ರಂದು ವಿವಾಹ ನಡೆಯಲಿದೆ ಎಂದು ಗಾಂಧಿನಗರದಲ್ಲಿ ಸುದ್ದಿ ಸದ್ದು ಮಾಡುತ್ತಿದೆ.

ಮಾಡೆಲಿಂಗ್ ಕ್ಷೇತ್ರದಿಂದ ಬಣ್ಣದ ಬದುಕಿಗೆ ಕಾಲಿಟ್ಟ ಸೋನಲ್, ಮಿಸ್ ಬ್ಯೂಟಿಫುಲ್ ಸ್ಮೈಲ್ 2013, ಮಿಸ್ ಕೊಂಕಣ್ 2015 ಕಿರೀಟ ಅಲಂಕರಿಸಿದ್ದಾರೆ. ತುಳು ಚಿತ್ರರಂಗದ ಮೂಲಕ ಬಣ್ಣದ ಬದುಕು ಆರಂಭಿಸಿದ ಸೋನಲ್ ಮೊದಲ ಚಿತ್ರ ಎಕ್ಕ ಸಕ, ಈ ಚಿತ್ರ ನೂರು ದಿನ ಯಶಸ್ವೀ ಪ್ರದರ್ಶನ ಕಾಣುವ ಮೂಲಕ ತುಳು ನಾಡಿನ ತುಂಬ ಸೋನಲ್ ಹೆಸರುವಾಸಿಯಾಗಿದ್ದರು.

ಕನ್ನಡ ಸಿನೆಮಾ ಲೋಕಕ್ಕೆ ಎಂಟ್ರಿ ಕೊಟ್ಟ ಸೋನಲ್ ಅಭಿಸಾರಿಕೆ, ಮದುವೆ ದಿಬ್ಬಣ, ಪಂಚತಂತ್ರ, ಶಾಸಕ, ಡೆಮೊ ಪೀಸ್, ರಾಬರ್ಟ್, ಬನಾರಸ್ ಸಿನೆಮಾಗಳಲ್ಲಿ ಅಭಿನಯಿಸಿ ಕರ್ನಾಟಕಕ್ಕೆ ಚಿರಪರಿಚಿತರಾಗಿದ್ದಾರೆ.

ಬುದ್ಧಿವಂತ 2, ಮಾದೇವ, ಮಾರ್ಗರೇಟ್‌ ಲವರ್ ಆಫ್ ರಾಮಾಚಾರಿ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ.

ತರುಣ್​ ಸುಧೀರ್​ ಮತ್ತು ಸೋನಲ್​ ಮಾಂಥೆರೋ ಅವರು ‘ರಾಬರ್ಟ್​’ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. 2021ರಲ್ಲಿ ತೆರೆಕಂಡ ಆ ಸಿನಿಮಾಗೆ ತರುಣ್​ ಸುಧೀರ್​ ನಿರ್ದೇಶನ ಮಾಡಿದ್ದರೆ, ಒಂದು ಪ್ರಮುಖ ಪಾತ್ರದಲ್ಲಿ ಸೋನಲ್​ ಮಾಂಥೆರೋ ನಟಿಸಿದ್ದರು. ಇಬ್ಬರೂ ಈಗ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಕಡೆಯಿಂದಲೇ ಅಧಿಕೃತ ಸುದ್ದಿ ಹೊರಬೀಳಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇದರ ನಡುವೆ ಗಾಂಧಿನಗರದಲ್ಲಿ ಗಾಸಿಪ್ ರೂಮರ್ ಎದ್ದಿದೆ. 38 ವರ್ಷದ ನಟ ನಿರ್ದೇಶಕ ತರುಣ್ ಸುಧೀರ್ 29ರ ಹರೆಯದ ನಟಿ ಸೋನಲ್ ಮೊಂಥೆರೋ ಅವರ ಕೈ ಹಿಡಿಯಲಿದ್ದಾರೆ ಎಂಬುದಾಗಿ .

ಈ ಬಗ್ಗೆ ಇಬ್ಬರೂ ಪ್ರತಿಕ್ರಿಯೆ ನೀಡಿದ್ದು, ಇದೆಲ್ಲಾ ನಿಜನಾ ಅಂತ ಕೇಳಿದ್ರೆ ರೂಮರ್ ಎಂದು ತರುಣ್ ಸುಧೀರ್ ಹೇಳಿದ್ರೆ ಇಂತಹ ವಿಚಾರಗಳನ್ನು ಎರಡೂ ಮನೆಯವರು ಕುಳಿತು ಮಾತನಾಡಬೇಕು ಅಂತಾರೆ ನಟಿ ಸೋನಲ್ , ಅಲ್ಲಿಗೆ ಮದುವೆ ಇನ್ನೂ ಆನ್ ದಿ ವೇ ಅಂತ ಗೊತ್ತಾಗುತ್ತಿದೆ. ಈ ಶುಭ ಸುದ್ದಿಗೆ ಇನ್ನೂ ಸ್ವಲ್ಪ ದಿನ ಗಾಂಧಿನಗರ ಕಾಯಬೇಕಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!