ರಾಜ್ಯದಲ್ಲಿ ಹೊಲಸು, ಕೆಟ್ಟ ರಾಜಕಾರಣ ನಡೆಯುತ್ತಿದೆ: ವಾಟಾಳ್ ನಾಗರಾಜ್

ಹೊಸದಿಗಂತ ವರದಿ, ಮೈಸೂರು:

ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಎಲ್ಲ ಸೀಟುಗಳನ್ನು ಅವರವರ ಮಕ್ಕಳಿಗೆ, ಸಂಬoಧಿಕರಿಗೆ ಹಂಚಿಕೊoಡಿದ್ದಾರೆ ಎಂದು ಕನ್ನಡ ಚಳುವಳಿ ಹಿರಿಯ ಹೋರಾಟಗಾರ, ಮಾಜಿ ಶಾಸಕ ವಾಟಾಳ್ ನಾಗರಾಜ್ ರಾಜ್ಯದಲ್ಲಿನ ಕುಟುಂಬ ರಾಜಕಾರಣದ ಬಗ್ಗೆ ಕಿಡಿಕಾರಿದರು.

ಸೋಮವಾರ ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣವಂತರಿಗೆ ಮಾತ್ರ ಈ ಚುನಾವಣೆ ಬೇರೆಯವರಿಗೆ ಚುನಾವಣೆ ಅನ್ನೋದು ಬರಿ ಕನಸು. ಅಪ್ಪ ಕಿಂಗ್ ಮೇಕರ್, ಮಗ ಅಧ್ಯಕ್ಷ, ಇನ್ನೊಬ್ಬ ಮಗ ಲೋಕಸಭಾ ಅಭ್ಯರ್ಥಿ. ಮತ್ತೊಂದು ಪಕ್ಷದಲ್ಲಿ ಅಪ್ಪ ಎಂಎಲ್‌ಎ, ಮಗ ಮಂತ್ರಿ, ಸೊಸೆ ಲೋಕಸಭೆಗೆ ಅಭ್ಯರ್ಥಿಯಾಗಿದ್ದಾರೆ. ಇವತ್ತಿನ ಚುನಾವಣಾ ವ್ಯವಸ್ಥೆ ಬಹಳ ಹದಗೆಟ್ಟಿ ಹೋಗಿದೆ. ರಾಜ್ಯದಲ್ಲಿ ಹೊಲಸು, ಕೆಟ್ಟ ರಾಜಕಾರಣ ನಡೆಯುತ್ತಿದೆ. ಇದರ ವಿರುದ್ಧ ನಾನು ಪ್ರಾಮಾಣಿಕವಾಗಿ ಚುನಾವಣೆ ಎದುರಿಸಲು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಯಾವುದೇ ಹಣ, ಜಾತಿ ಬೆಂಬಲ ಇಲ್ಲದೆ, ದಬ್ಬಾಳಿಕೆ ಇಲ್ಲದೆ, ಗೂಂಡಾಗಿರಿ ಮಾಡದೆ ಮತ ಕೇಳಲು ಸ್ಪರ್ಧೆ ಮಾಡಿದ್ದೇನೆ. ಪ್ರಾಮಾಣಿಕರು ನನಗೆ ಮತ ಮಾಡುವ ವಿಶ್ವಾಸ ಇದೆ. ನಾನು ಚುನಾವಣೆಗೆ ಸ್ಪರ್ಧೆ ಮಾಡಿರುವುದು ಕನ್ನಡಕ್ಕಾಗಿ, ಕನ್ನಡದ ಉಳಿವಿಗಾಗಿ ಇವತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!