ಹೊಸ ದಿಗಂತ ವರದಿ, ಕಲಬುರಗಿ:
ಹಾಡಹಗಲೇ ಅಂಗವಿಕಲ ಯುವಕನೊರ್ವ ನನ್ನು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ನಗರದ ಕೆ ಬಿ ಎನ್ ಆಸ್ಪತ್ರೆ ಎದುರಿಗೆ ಶನಿವಾರ ಸಂಜೆ ನಡೆದಿದೆ.
ನಗರದ ಫಿಲ್ಟರ್ ಬೆಡ್ ನಿವಾಸಿ ವಿಜಯ್ ಎಂಬಾತನಿಗೆ ಚಾಕು ಇರಿಯಲಾಗಿದೆ. ಚಾಕು ಇರಿತದಿಂದ ವಿಜಯ ನಡುರಸ್ತೆಯಲ್ಲಿ ಬಿದ್ದು ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದರು ಸಹ ಸ್ಥಳೀಯರು ಅಸಹಾಯಕರಂತೆ ನಿಂತು ಮೊಬೈಲ್ ನಲ್ಲಿ ದೃಶ್ಯ ಸೆರೆಹಿಡಿದು ಅಮಾನವೀಯತೆ ಮೆರೆದಿದ್ದಾರೆ.
ಬಳಿಕ ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್ ಪೊಲೀಸರು ಗಾಯಾಳು ವಿಜಯ ನನ್ನು ಆಸ್ಪತ್ರೆಯ ರವಾನಿಸಿದ್ದಾರೆ. ಇನ್ನೂ ಕಳೆದ ಕೆಲ ತಿಂಗಳ ಹಿಂದೆಯಷ್ಟೆ ದುಷ್ಕರ್ಮಿಗಳು ವಿಜಯ್ ಕಾಲು ಕಟ್ ಮಾಡಿ ಕ್ರೌರ್ಯ ಮೆರೆದಿದ್ರು ಎನ್ನಲಾಗಿದೆ. ಅದೆ ದುಷ್ಕರ್ಮಿಗಳು ಚಾಕು ಇರಿದಿರುವ ಶಂಕೆ ವ್ಯಕ್ತವಾಗಿದೆ.
ಸದ್ಯ ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸರು ತನೀಖೆ ಕೈಗೊಂಡಿದ್ದಾರೆ.